ಕಾವ್ಯ ಸಂಗಾತಿ
ಕೆ. ಎಂ. ಕಾವ್ಯ ಪ್ರಸಾದ್
“ಹೇಳಿ ಹೋಗ ಬೇಕಿತ್ತು ಕಾರಣ”


ನೀ ಹೇಳಿ ಹೋಗ ಬೇಕಿತ್ತು ಕಾರಣವು
ನನ್ನ ಬಿಟ್ಟು ದೂರ ಹೋಗುವ ಮೊದಲು!
ನನ್ನನ್ನು ಒಂಟಿಯಂತೆ ಬೇರೆ ಮಾಡಿ ನೋಡಲು
ಸಂಶಯವು ನಿನ್ನಲ್ಲಿ ಹುಟ್ಟಿದೆ ನನ್ನ ಮರಣವು!!
ನಿನ್ನ ಕಣ್ಣೆದುರೆ ಬಿರಿಯೆ ಕರುಳ ಕುಡಿ ಸತ್ಯವು
ಕಣ್ಣನೀರು ಸುರಿಸಿದೆ ಏಕೆ ನೀನು ಮೌನವು!
ನಿನ್ನ ಜೊತೆ ಕೂಡಿ ಬಾಳುವ ಆಸೆ ನಾ ಕಂಡೆನು
ನೂರಾರು ಕನಸನು ಗಾಳಿಗೆ ತೂರಿ ಹೋದನು!!
ಕರುಳ ಸಂಬಂಧ ಅನುಬಂಧ ಕಡಿದು ಎಸೆದೆ
ಪ್ರೀತಿ ಕುರುಡು ನಂಬಿಕೆ ಮೋಸವನು ವೆಸಗಿದೆ!
ಸುಡುವ ಬೆಂಕಿಯಂತೆ ಮಾತಲ್ಲೇ ನನ್ನ ಕೊಂದೆ
ಕೊಟ್ಟ ಆಣೆ ಪ್ರಮಾಣ ಮರೆತು ದೂರ ಹೋದೆ!!
ನನ್ನ ನೆರಳಲ್ಲಿ ನಿನ್ನ ನೆರಳು ಜೊತೆ ಕಂಡೆನು
ಕತ್ತಲು ಕವಿದ ಇರುಳಲ್ಲಿ ನಿನ್ನ ನೆನಪು ಸವಿದೇನು!
ಬೆಳಕು ಚೆಲ್ಲುವ ಸಮಯದಲ್ಲಿ ಕೊರಳು ಕಡಿದನು
ಸೆರೆ ಸಿಕ್ಕ ಮೀನಿನಂತೆ ನನ್ನ ದೂರ ತಳ್ಳಿದನು!!
ನನ್ನ ಜೀವನವೇಕೆ ಅಲೆಮಾರಿ ಬದುಕಾಯಿತು
ಕನಸಿನ ಗೋಪುರವು ನುಚ್ಚು ನುರಾಯಿತು
ಎಲ್ಲಿಗೆ ಸಾಗಿದೆ ಕರುಣೆ ಇಲ್ಲದ ಈ ಜಗವು
ನನ್ನ ನೆರಳ ದಾರಿ ದೀಪ ಮುಳುಗುತ್ತಿರುವುದು!!
ಕೆ. ಎಂ. ಕಾವ್ಯ ಪ್ರಸಾದ್



