ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಕಿಲಾಪತ್ ಸೇನಾನಿಗರು.1921”


ಸ್ವಾತಂತ್ರ್ಯದ….
ವೀರಾಧಿ ವೀರರಿವರು,
ಮಲೆಬಾರ ಮಣ್ಣಿನ ಧೀರರು,
ಕಿಲಫತ್ ಕದನದ ಯೋಧರಿವರು,
ಕೇರಳದ ಮಾಪಿಲ ಕಾಕರು,
ಮಲಬಾರಿನ ಕೆಚ್ಚೆದೆಯ ಸೇನಾನಿಗರು,!
ಅಂದು ಆ ನಮ್ಮವರು,
ಹಿರಿಯರು ಕಿರಿಯರೆಲ್ಲರು,
ಎದೆಯೊಡ್ಡಿ ಹೋರಾಡಿದವರು,
ಜನ್ಮಭೂಮಿಗೆ ಸ್ವಾತಂತ್ರ್ಯ ತಂದವರು,
ಕಿಚ್ಚಿನ ಮಾಪಿನ ಕಾಕರು,
ಮಲಬಾರಿನ ಕೆಚ್ಚೆದೆಯ ಸೇನಾನಿಗರು,!
ಬಿಳಿಯರ ಬಿಲಗಳ…
ಮುತ್ತಿಟ್ಟು ಘರ್ಜಿಸಿದವರು,
ಸ್ವಾತಂತ್ರ್ಯಕ್ಕಾಗಿ ಬಲಿಯಾದವರು,
ಬಂದೂಕಿಗೆ ಎದೆಕೊಟ್ಟ ದೇಶ ಭಕ್ತರು
ಭಾರತದ ಮಾಪಿಲ ಸುಪುತ್ರರು,
ಮಲಬಾರಿನ ಕೆಚ್ಚೆದೆಯ ಸೇನಾನಿಗರು,!
ಸ್ವಾತಂತ್ರ್ಯದ ಕಿಚ್ಚಲಿ…
ಸೆಣದಾಡಿ ಗೆದ್ದ ಕಿಲಾಪತರು,
ಸ್ವಾತಂತ್ರ್ಯ ಭಾರತದ ಕನಸಿಗರು,
1921ರ ಧೀರಾ ಕಿಲಾಪತ್ ಸೇನಾನಿಗರು,
ಕೇರಳ ಮಣ್ಣಿನ ಮಾಣಿಕ್ಯರು
ಮಲಬಾರಿನ ಕೆಚ್ಚೆದೆಯ ಸೇನಾನಿಗರು,!
ಸ್ವಾತಂತ್ರ್ಯದ ಧ್ಯೇಯಕೆ…
ಒಕ್ಕೊರಲ ಕೂಗಿಗೆ ಬ್ರಿಟಿಷರು,
ಸೋಲ ಉಣಿಸಿ, ಬೆಚ್ಚಿಸಿ ಬಿಟ್ಟವರು,
ಬ್ರಿಟೀಷರ ಕೋವಿಗೆ ಜೀವ ತೆತ್ತವರು
ಎದೆಯೊಡ್ಡಿದ ಬಲಿದಾನಿಗಳು,
ಮಲಬಾರಿನ ಕೆಚ್ಚೆದೆಯ ಸೇನಾನಿಗರು.!
ಹಮೀದ್ ಹಸನ್ ಮಾಡೂರು.




