ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಇಂದು ಈ ಮುಸ್ಸಂಜೆಯಲಿ….
ಯಾರೋ ಎಲ್ಲೋ
ಪ್ರೀತಿಸುವ ಹೃದಯಕೆ
ನೋವುಣಿಸಿರಬೇಕು…
ಅಕಾಲದಲ್ಲಿ ಆಕಾಶ್
ಆರ್ಭಟಿಸಿ ಭೋರ್ಗರೆದು
ಹೀಗೆ ಸುರಿಯಬೇಕಾದರೆ…
ಸದ್ದಿಲ್ಲದೇ ಒಡೆದ
ಎದೆ ತುಣುಕುಗಳು
ಮುಗಿಲಲಿ ಶೋಕಗೀತೆ
ನುಡಿಸುತಿವೆ….

ಯಾರೋ ಎಲ್ಲೋ
ಹೂವಂತ ಮನಸನು
ಮಾತಿನ ಮುಳ್ಳುಗಳಿಂದ
ಚುಚ್ಚಿ ನೋಯಿಸಿರಬೇಕು…
ಹೆಪ್ಪುಗಟ್ಟಿದ ದುಃಖ
ಕಪ್ಪು ಮೋಡದ ಒಡಲ
ಬಗೆದು ಭೋರೆಂದು
ಭುವಿಯ ಅಪ್ಪುತಿದೆ…

ಯಾರೋ ಎಲ್ಲೋ
ಸ್ನೇಹ ತುಂಬಿದ ಕಂಗಳಿಗೆ
ಅಪಮಾನ  ಆಪಾದನೆ
ಪಟ್ಟಿ ಕಟ್ಟಿರಬೇಕು….
ಗರಬಡೆದ ಮುಗಿಲೂ ದುಃಖಿಸಿ
ಬಿಕ್ಕಿಸಳುತ ಮುತ್ತುಮಳೆ
ಸುತ್ತ ಸುರಿಸುತಿದೆ ನೋಡು..

ತಪ್ಪು ಮಾಡದ ಜೀವ
ಬಿಟ್ಟ ಬಿಸಿಯುಸಿರ ಕಾವಿಗೆ
ಸುಟ್ಟು ಸುಡುವ ಸೂರ್ಯನೇ  
ನಲುಗಿ ಮರೆಯಾಗಿ ಹೋದ….
ಹೂಹೃದಯ ಒಡೆದು ಚೂರಾಗಿದೆ
ಬಿರುಮಾತಿನ ಬಾಣಗಳಿಗೆ…
ಪ್ರೀತಿಸಿದ ತಪ್ಪಿಗೆ…..


About The Author

7 thoughts on “ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..””

  1. ಒಳ್ಳೆ ಕಾವ್ಯದ ಹೆಣಿಕೆ…. ಭಾವನೆಗಳ ಸ್ಪಂದನ…. ಜೀವನದ ಕಟು ಸತ್ಯವಿದು…
    ತುಂಬಾ ಚೆನ್ನಾಗಿ ಮೂಡಿ ಬಂದಿದೆ .

    ಸವಿತಾ ದೇಶಮುಖ

  2. Indira motebennur.Belagavi

    ಕವಿತೆಯ ಹೃದಯದಾಳವ ಹೊಕ್ಕು…. ಭಾವ ಮಿಡಿತಗಳನ್ನು ಆಲಿಸಿ …. ಸ್ಪಂದಿಸಿದ ಹೂ ಮನಸಿಗೆ ವಂದನೆಗಳು…..

    – *ಇಂದಿರಾ ಮೋಟೆಬೆನ್ನೂರ.ಬೆಳಗಾವಿ*.

Leave a Reply

You cannot copy content of this page

Scroll to Top