ವಚನ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ

“ಅಲ್ಲಮ ಪ್ರಭು ವಚನ ವಿಶ್ಲೇಷಣೆ”
ಸತಿಯ ಕಂಡು ಬೃತಿಯಾದ ಬಸವಣ್ಣ

ಸತಿಯ ಕಂಡು ಬೃತಿಯಾದ ಬಸವಣ್ಣ
ಸತಿಯ ಕಂಡು ಬೃತಿಯಾದ ಬಸವಣ್ಣ
ಬೃತಿಯಾದ ಬ್ರಹ್ಮಚಾರಿಯಾದ ಬಸವಣ್ಣ
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯ ಬಸವಣ್ಣ
ಗೃಹೇಶ್ವರ ನಿಮ್ಮಲ್ಲಿ ಬಾಲ ಬ್ರಹ್ಮಚಾರಿಯಾಗಿ ಬಸವಣ್ಣ ಒಬ್ಬನೇ
-ಅಲ್ಲಮ ಪ್ರಭುಗಳು.
ಪ್ರಾಪಂಚಿಕ ಬದುಕಿನ ವಿಷಯಾದಿಗಳ, ಆಮಿಷ, ಆಸೆ ಆಕರ್ಷಣೆಗಳ ಕಂಡು ಬಸವಣ್ಣ ವೃತ್ತಿಯಾದನು. ಅವುಗಳನ್ನು ಹೊರತುಪಡಿಸಿ ಶುದ್ಧನಾದ ಆಚಾರವಂತ ಗುಣವಂತ ವೃತವನ್ನು ಹಿಡಿದನು. ಕಾಮ ಕ್ರೋಧ ಮೋಹ ಲೋಭ ಮದ ಮತ್ಸರ ಮುಂತಾದ ಅರಿ ಷಡ್ ವರ್ಗಗಳ ಬೆಂಕಿಗೆ ಸಿಲುಕದೆ ತನ್ನ ನಿಯಮ ವೃತವನ್ನು ಆಚರಿಸಲು ಸತಿಯೇನೆಂಬ ವ್ಯಾಮೋಹದಿಂದ ದೂರವಿರಲು ಬೃತೀಯಾದ (ವೃತಿ) ಬಸವಣ್ಣ.
ಬೃತಿಯಾದ ಬ್ರಹ್ಮಚಾರಿಯಾದ ಬಸವಣ್ಣ
ವೃತ್ತಿಯಾದ ಬಸವಣ್ಣ ಬ್ರಹ್ಮಚಾರಿಯಾಗಿ ಇಂತಹ ಸಂಸಾರಿಕ ಮೋಹಕ್ಕೆ ಸಿಲುಕದೆ ಭವ ಭವದಲ್ಲಿ ಬೆಂದು ಬಳಲಿ ಮುಕ್ತಿ ಕಾಣದೆ ಪರದಾಡುವದಕ್ಕಿಂತ,
ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ದೀಕ್ಷೆ ಪಡೆದ ಬಸವಣ್ಣ ಜ್ಞಾನಮಾರ್ಗದಲ್ಲಿ ನಡೆದನು. ಬ್ರಹ್ಮಚಾರಿ ಎನ್ನುವುದು ಕೇವಲ ಸನ್ಯಾಸತ್ವಕ್ಕೆ ಸೀಮಿತ ಪದವಲ್ಲ. ಸೃಷ್ಟಿ ಸ್ಥಿತಿ ಲಯದ ಜೊತೆಗೆ ಕಾಯ ಮನಸ್ಸು ಆತ್ಮಗಳ ನಿರಂತರ ಮಿಲನಗಳ ಶೋಧನೆಯ ಬ್ರಹ್ಮಚಾರಿತನ. ಹಾಗೆ ವ್ರತವ ಹಿಡಿದು ಬ್ರಹ್ಮಚಾರಿಯಾದ ಬಸವಣ್ಣ.
ಬ್ರಹ್ಮಚಾರಿಯಾಗಿ ಭವಗೆಟ್ಟಣಯ್ಯಾ ಬಸವಣ್ಣ
ಅಪೂರ್ವ ಬ್ರಹ್ಮಚಾರಿತನ ಸ್ವೀಕರಿಸಿದ ಬಸವಣ್ಣನವರು ಭವದಿಂದ ಮುಕ್ತರಾದರು. ಭವದಲ್ಲಿ ಸಿಲುಕದೆ ಭತ್ತನಾದರು ಬಸವಣ್ಣನು. ತನ್ನ ಭವದ ಪಾಶ ಕಳೆದುಕೊಂಡು ಭಕ್ತಿ ಮಾರ್ಗದಲ್ಲಿ ನಿತ್ಯಮುಕ್ತರಾದರು ಬಸವಣ್ಣ.
ಗುಹೇಶ್ವರ ನಿಮ್ಮಲ್ಲಿ ಬಾಲಬ್ರಹ್ಮಚಾರಿ ಯಾದ ಬಸವಣ್ಣ ಒಬ್ಬನೇ
ಬಸವಣ್ಣನವರು ಮದುವೆಯಾಗಿ ಮಂತ್ರಿ ಪದವಿ ಪಡೆದು ಐಶ್ವರ್ಯ ಅಂತಸ್ತು ಇದ್ದರೂ ಅವುಗಳನ್ನು ತ್ಯಜಿಸಿ ಭೃತ್ಯಚಾರದ ಭಕ್ತ ಪದವಿಯಿಂದ ನಿರ್ಲಪ್ತರಾದರು.
ಇಂತಹ ಘನ ಮಹಿಮರು ಗುಹೇಶ್ವರ ಲಿಂಗದಲ್ಲಿ ಬಾಲ ಬ್ರಹ್ಮಚಾರಿಯಾಗಿ ಬಸವಣ್ಣ ಒಬ್ಬನೇ. ಹುಟ್ಟಿನಿಂದ ವಿರಕ್ತ ಭಾವಸಮತೆ ಧ್ಯಾನ ಮುಕ್ತಿಯತ್ತ ಆಸಕ್ತನಾದವರು ಬಸವಣ್ಣನವರು ಬಾಲ ಬ್ರಹ್ಮಚಾರಿ ಹುಟ್ಟು ಬ್ರಹ್ಮಚಾರಿ ಆಗಿ ಬದುಕಿದವರು. ವ್ಯವಸ್ಥೆಯ ಎಲ್ಲ ಬಂಧನಗಳನ್ನು ಸಂಕೋಲೆಗಳನ್ನು ಕಿತ್ತುಹಾಕಿ, ಆಡಂಬರಗಳನ್ನು ಧಿಕ್ಕರಿಸಿ ಮುಕ್ತ ಸಾರ್ವಕಾಲಿಕ ಸಮಾನತೆ ಸಮಾಜ ಕಟ್ಟಲು ಬಾಲ್ಯದಿಂದಲೇ ಸಂಕಲ್ಪ ಮಾಡಿದವರು ಸೃಷ್ಟಿಯಲ್ಲಿ ಬಸ್ವಣ್ಣನೊಬ್ಬರೇ ಎಂದು ಅಲ್ಲಮಪ್ರಭುಗಳು ಬಸವಣ್ಣನವರ ದಿವ್ಯ ವ್ಯಕ್ತಿತ್ವದ ಗುಣ ಗಾನ ಮಾಡುತ್ತಾರೆ.
ವಿಜಯಲಕ್ಷ್ಮಿ ಹಂಗರಗಿ




