ಕಾವ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ”
ಸುಮನಾ ರಮಾನಂದ,ಕೊಯ್ಮತ್ತೂರು
“ಮಮತೆಯ ಸ್ವಗತ”


ಒಲುಮೆಯ ಕಾಣಿಕೆಯಂತೆ
ಬಂದೆ ಅಪ್ಪ ನೀ ನನ್ನ ಬಾಳಿಗೆ!
ನಿನ್ನ ಮಡಿಲಲಿ ನಾ ನೆಲೆಯಾಗಿ ನಿಂತೆ..
ತುಂಬಿ ನನ್ನ ಸಂತಸದ ಜೋಳಿಗೆ!!
ನಿನ್ನ ನೆನೆಯದೇ ಇನಿತೂ
ಕಳೆಯದು ಈ ಬದುಕು!
ನಿನ್ನ ಸವಿನೆನಪಿನ ಕ್ಷಣಗಳೆ..
ಈ ಮಗಳಿಗೆ ಹಸಿರ ಬೆಳಕು!!
ಮನದಂತರಾಳದ ಬೆಚ್ಚನೆಯ ಕಾವಲಲಿ
ನಿನ್ನದೇ ಒಲವದು ಅಡಗಿದೆ!
ಸಂತಸದಿ ಮಿಡಿದ ಕಂಬನಿಯಲೂ..
ಅಳಿಯದ ನಿನ್ನ ಭಾವವಿದೆ!!
ಪಡೆದ ಸಂತಸದ ಎಣಿಕೆಯಿರದು
ನಿನ್ನ ಪ್ರೀತಿಯ ಸಿಂಚನದಲಿ!
ಹನಿಯೊಂದು ತಾ ಜಿಗಿಯಲು
ತವಕಿಸಿದಂತೆ
ಮೋಡದಂಚಿನಲಿ!!
ಸುಮನಾ ರಮಾನಂದ,ಕೊಯ್ಮತ್ತೂರು




ಒಲುಮೆಯ ಕಾಣಿಕೆಯಂತೆ ನೀ ಬಂದೆ ಅಪ್ಪ ನನ್ನ ಬಾಳಿಗೆ ಅದ್ಭುತ ಕವನಗಳ ಸಾಲುಗಳು ಮೇಡಂ