ಕಾವ್ಯ ಸಂಗಾತಿ
ಪ್ರೊ. ರಾಜೇಶ್ವರಿ ಶೀಲವಂತ ಪುಣೆ
“ಸಂವೇದನೆ”.


ಮರಿ ಹಕ್ಕಿಗೆ ರೆಕ್ಕೆಗಳಿವೆ
ಎಲ್ಲವನು ಎದುರಿಸುವ
ಛಲವಿದೆ
ಆಗಸದೆತ್ತರಕ್ಕೆ ಏರುವ
ಆಕಾಂಕ್ಷೆಯಿದೆ
ರೆಕ್ಕೆಯ ಶಕ್ತಿಗೆ
ಅನುಮತಿಗಿಂತ
ಪ್ರೀತಿ ವಿಶ್ವಾಸದ
ಆರೈಕೆಯಿರಲಿ
ಬಾನೆತ್ತರಕೆ ಹಾರಬೇಕಾದ
ಒಲವಿರಲಿ
ಜೊತೆಯಿರುವೆನೆಂಬ
ಭರವಸೆಯಿರಲಿ
ಸಂವಾದದ
ಸಂವೇದನೆಯಿರಲಿ.
ಪ್ರೊ. ರಾಜೇಶ್ವರಿ ಶೀಲವಂತ ಪುಣೆ



