ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ನಿಸ್ವಾರ್ಥ ಭಾವ”


ಚಳಿ ಇರಲಿ ಮಳೆ ಇರಲಿ
ಅಂಜದೆ ಅಳುಕದೆ
ಗಟ್ಟಿಯಾಗಿ ನಿಲ್ಲುವೆ
ಬಿಸಿಲಿರಲಿ ಬರಡಿರಲಿ
ಆಸೆಗಳನು ಅಳಿಸದೆ
ಕನಸು ಕಾಣುತಲಿರುವೆ
ಕೊಡಲಿ ಪೆಟ್ಟು ಬಿದ್ದರೂ
ಟೊಂಗೆಗಳುರುಳಿದರೂ
ಎಲ್ಲ ಸಹಿಸಿಕೊಳ್ಳುವೆ
ಮೌನವಾಗಿ ಸಹಿಸುತ
ಛಲವ ಮಾತ್ರ ಬಿಡದೆ
ಮತ್ತೆ ಮತ್ತೆ ಚಿಗುರುವೆ
ಕೆಡುಕು ಬಯಸಿದ
ಸ್ವಾರ್ಥ ಮನುಜನಿಗೆ
ನೆರಳಾಗಿ ನಿಲ್ಲುವೆ
ಗಿಡ ಮರಗಳ
ನಿಸ್ವಾರ್ಥ ಭಾವ ಅರಿತರೆ
ಮನುಜ ನೀ ಬಾಳುವೆ
ಜಯಶ್ರೀ ಎಸ್ ಪಾಟೀಲ




