ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
“ಮೌನ ಮಾತಾದಾಗ…”


ಅಟ್ಟದ ಮೇಲೆ ಕೂಡಿಟ್ಟ
ಕನಸುಗಳು ಅದೆಷ್ಟೋ,
ನನಸಾಗದೆ ನೆನಪುಗಳಾಗಿ
ಕಿಡಕಿಯ ಕಂಬದ
ಬಣ್ಣಗಳಾಗಿ ಉಳಿದ
ಮಾತುಗಳು ಅದೆಷ್ಟೋ…..
ಇಂದೇಕೋ ಮನೆ ಮಾತಾಡಿದೆ,
ಮನಗಳು ಮೌನವಾದಾಗ…
ಗಾಜಿನ ಹಂಚಿನಿಂದ
ಬೆಳಕೊಂದು ಇಣುಕಿ ನೋಡಿದೆ,
ಮನೆಯೊಳಗೆ ಮಂದಿ
ಎಷ್ಟೂ ಇಹರೆಂದು….
ಅದೆಷ್ಟೋ ನಗುವಿನ ಸದ್ದು
ಕೇಳಿರುವ ಕಂಬಗಳು
ಮತ್ತೆ ಮತ್ತೆ ಎದುರು ನೋಡುತಲಿದೆ,
ಅಳುವಿನಲ್ಲೊಂದು ನಗುವು
ಸಿಗಬಹುದೆಂದು…
ಅಜ್ಜನ ಕವಳದ ಚಂಚಿಯೊಂದು
ಮತ್ತೆ ಹಂಬಲಿಸುತಲಿದೆ
ಜಗುಲಿಯ ಹಾಳು ಹರಟೆಯ ಸದ್ದು…
ಅಂಗಳದ ರಂಗವಲ್ಲಿ
ಮತ್ತೆ ಎದುರು ನೋಡುತ್ತಿದೆ,
ಪಟ್ಟಣ ನುಂಗಿದ ಕನಸುಗಳು
ನನಸಾಗಿ ಮತ್ತೆ ಚಿತ್ತಾರ ಮೂಡಿಸುವುದೆಂದು………………..
ಅಕ್ಷತಾ ಜಗದೀಶ.




ಅದ್ಭುತ ಕವನ✌️
Very nice
It was very interesting to see the contrast between village routines to city routines regarding life that we want to live and still not given up on ideas that left behind the timeline.