ಕಾವ್ಯ ಸಂಗಾತಿ
ಟಿ. ದಾದಾಪೀರ್ ತರೀಕೆರೆ
ಸುಮನ್ ಕಾಲಬೇಲಿಯಾ

ಮೇಳಗಳ ಮೆರಗು ಹೆಚ್ಚಿಸುವ
ಮಾಯಾಂಗನೆಯರ ಸಾಲಿನಲ್ಲಿ
ಮತ್ತೊಬ್ಬಳು ಮೋನಾಲಿಸಾ
ಕುಂಭಮೇಳದ ಮೋನಾಲಿಸಳ
ಕಣ್ಣುಗಳ ಸುಮ೯ , ಕಾಜಲ್ ಮಸಿ
ನಮ್ಮ ಮನದ ಗೂಡಲ್ಲಿ ಕಪ್ಪು ಕಟ್ಟಿರುವಾಗಲೆ
ಪುಷ್ಕರ್ ಮೇಳದ ಸುಮನ್ ಕಣ್ಣುಗಳು ಆಕಷಿ೯ಸುತ್ತಿವೆ
ಕಾಲಬೇಲಿಯಾ ಡಾನ್ಸ್ ಗೆ ದೇಹ ಬಳುಕಿಸುವ ನೂರಾರು ಸುಮನ್ ಗಳ
ನಿಶಾಚರಿ ಕಣ್ಗಳು ನಮ್ಮನ್ನು ಏಕೆ
ಸೆಳೆಯುತ್ತಾರೊ ಗೊತ್ತಿಲ್ಲ
ಕ್ಯಾಮೆರ ಕಣ್ಣುಗಳಿಗೆ
ಚೆಲುವೆಯರ ಕಣ್ಗಳ ಚೆಲುವು ಮಾತ್ರ ಗೊತ್ತು
ಅಲ್ಲಿ ಅದುಮಿಟ್ಟ ಹಸಿವು
ತಾಪ
ಕೋಪ
ಕನಸು
ಮೌನ
ಬೇಸರಿಕೆ
ನೀರ ಪಸೆ
ಥೂ… ಎನಿಸುವಷ್ಟು ಅಸಹನೆ
ಗುರಿ ಕಾಣದ ಚಲನೆ
ಇದ್ಯಾವುದು ಬೇಕಿಲ್ಲ
ಕಾಲೇಜು , ಕಲ್ಚರ್ , ಫ್ಯೂಚರ್ ಚಿಂತೆಯಲ್ಲಿ ನಮ್ಮ ಮನೆ ಮಕ್ಕಳು ಸೇಫ್
ಹೊಟ್ಟೆ ತುಂಬಲು ಕುಣಿವ
ಶಾಲೆ ಬಿಟ್ಟ ಹೆಣ್ಮಕ್ಕಳು
ನಮ್ಮ ನೆಲದ ಕಲೆಯ ರಾಯಭಾರಿಗಳು
‘ ಭೇಟಿ ಬಚಾವೋ ಭೇಟಿ ಪಡಾವೋ’ ಸಕಾ೯ರದ ಕೂಗು
ಗರೀಬ್ ಭೇಟಿಗಳ ಕಾಲ
ಗುಂಗುರು ಮತ್ತು ಪಾಯಲ್ ಗಳ
ಜಲಕ್ ಜಲಕ್ ಸದ್ದಲ್ಲಿ ಕೇಳುತಿಲ್ಲ
ನಮ್ಮ ಕಣ್ಣುಗಳು ಕಾಲಬೇಲಿಯಾ ಡ್ಯಾನ್ಸರ್ ಗಳ ತಿರುಗುವ ಸೊಂಟದ ಸುತ್ತ ತಿರುಗುತ್ತಿವೆ
ಥೂ…
ನಾಚಿಕೆಯಿಲ್ಲದ ಎಲ್ಲರ ಕಣ್ಣುಗಳು ಕ್ಯಾಮೆರ ಕಣ್ಣುಗಳಾಗಿವೆ
————
ಪುಷ್ಕರ್ ಮೇಳ : ರಾಜಾಸ್ಥಾನದ ಪುಷ್ಕರ್ ಪಟ್ಟಣದಲ್ಲಿ ನಡೆವ ಒಂಟೆ ಮೇಳ
ಕಾಲಬೇಲಿಯಾ : ರಾಜಾಸ್ಥಾನಿ ಬುಡಕಟ್ಟು ನೃತ್ಯ
ಸುಮನ್ : ಪುಷ್ಕರ್ ಮೇಳದಲ್ಲಿ
ವೈರಲ್ ಆದ ಅಪ್ರಾಪ್ತ ಬಾಲ ನತ೯ಕಿ
https://www.youtube.com/shorts/5nDdZpfgm3I?feature=share

ಟಿ. ದಾದಾಪೀರ್ ತರೀಕೆರೆ
https://www.youtube.com/shorts/97lZlZNw0RI?feature=share



