ಕಾವ್ಯ ಸಂಗಾತಿ
ನಾಗರತ್ನ.ಹೆಚ್ ಗಂಗಾವತಿ
“ಗೆಲ್ಲುವೆ ಮನ”

ಬೇಕು ಬೇಡಿಕೆಗಳ ನಡುವೆ ಸಾಗಿದೆ ಜೀವನ
ಅರಿಯದ ಮನಗಳ ನಡುವೆ ಮೌನದ ತಲ್ಲಣ
ಕೋಪ ಮುನಿಸುಗಳ ನಡುವೆ ಜೀವನ ಪಯಣ
ಮತ್ತೇರಿದ ಗುಂಗಿನಲ್ಲಿ ಕೆಲವರ ಮಾತಿನ ಔತಣ
ಇರಲು ನಿನ್ನಲ್ಲಿ ತಾಳ್ಮೆಯ ಗುಣ ಗೆಲ್ಲುವೆ ನೀ ಎಲ್ಲರ ಮನ.
ಅಪರೂಪದ ಮಾತಿನ ಬಗೆಗಳ ಆಲಿಸುವ ತಾಳ್ಮೆಯ ಸೌಜನ್ಯ
ಸ್ವಾರ್ಥದ ಬೇಗೆಯಲ್ಲಿ ಬಂಧಗಳ ಬಿರುಕಿನ ಕಂಪನ .
ಆಡಿದವರ ಮಾತಿಗೆ ಹಾಕಬೇಕಿದೆ ವಿರಾಮ.
ನಿನ್ನ ನಡೆ-ನುಡಿಯಲ್ಲಿ ಇರಲಿ ಸದಾ ಚೇತನ
ಭಗವಂತನ ದಯೆ ಇರಲು ನಿನ್ನ ಮೇಲೆ ಸದಾ ಗೆಲುವಿನ ಪಯಣ.
ನಾಗರತ್ನ.ಹೆಚ್. ಗಂಗಾವತಿ

