ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ಅವರ ಎರಡು ಕವಿತೆಗಳು

ಮಾನವನಾಗು.
ಎಲೈ ಮನುಜನೇ..
ಹುಟ್ಟಿದ್ದು ನೀ ಮನುಜನಿಂದ,
ಮನುಕುಲಕ್ಕೆ ನೀ ಮುಳ್ಳಾಗದಿರು,
ದ್ವೇಷ ಅಸೂಯೆ ನೀ ತೋರದಿರು,!
ಎಲೈ ಮನುಜನೇ…
ತನ್ನ ತಾನೆಂದು ಬಣ್ಣಿಸದಿರು,
ಅನ್ಯರ ನೀನೆಂದು ದೂಷಿಸದಿರು,
ಮತೀಯ ದ್ವೇಷವ ನೀ ಬಿತ್ತದಿರು,!
ಎಲೈ ಮನುಜನೇ…
ರಾಜಕೀಯ ಕೆಡುಕಾಗಿದೆ,
ಮನುಕುಲಕ್ಕೆ ನೀನು ಮುಳ್ಳಾಗದೆ,
ಧರ್ಮದ ಹೆಸರಲಿ ಯಾರ ದ್ವೇಷಿಸದೆ,!
ಎಲೈ ಮನುಜನೇ…
ಪ್ರೀತಿಗೆ ನೀನು ಸ್ನೇಹಿತನಾಗು,
ಅಕ್ಕರೆ ಬೆರೆತ ಸಕ್ಕರೆ ನೀನಾಗು,
ಮಹನೀಯರ ಆದರ್ಶ ನೀನಾಗು,!
ಎಲೈ ಮನುಜನೇ…
ಸೇಡಿನ ತೋಪಿಗೆ ಹೆಗಲಾಗದೆ,
ರಣತಂತ್ರಗಾರಿಕೆಗೆ ಬಲಿಯಾಗದೆ,
ಮನುಕುಲಕ್ಕೆಂದು ಮಾರಕನಾಗದೆ,!
ಎಲೈ ಮನುಜನೇ…
ದೇಶ ಪ್ರೇಮವ ನೀ ಬೆಳೆಸು,
ಸರ್ವ ಧರ್ಮಗಳ ನೀ ಗೌರವಿಸು,
ನ್ಯಾಯದ ಕೂಗಿಗೆ ನೀ ಪ್ರತಿಧ್ವನಿಸು.!
******
ಸತ್ಯವು ಸೋತಿತೇ!?
ಸತ್ಯದ ಮಾರ್ಕೆಟೊಳಗೆ,
ಸುಳ್ಳುಗಳ ನಿತ್ಯ ಮಾರಾಟದಲಿ,
ಗ್ರಾಹಕರು ತುಂಬಿ ತುಳುಕುತ್ತಿಹರಲ್ಲ,!
ಸುಳ್ಳುಗಳೇ ಭರದಲಿ,
ಎಲ್ಲೆಡೆ ಮಾರಾಲ್ಪಡುತ್ತಿರಲು,
ಸತ್ಯದೆಡೆ ಚಿಂತನೆಗೆ ಬೆಲೆಯಿಲ್ಲವಲ್ಲ!.
ಸುಳ್ಳರ ಈ ಸಾಮ್ರಾಜ್ಯದಲಿ,
ಸತ್ಯವು ಈಗ ಮರಿಚಿಕೆಯಾಗಿರಲು,
ಸುಳ್ಳರೇ ಎಲ್ಲೆಡೆಯು ಮೆರೆಯುತ್ತಿಹರಲ್ಲ!.

ಹಮೀದ್ ಹಸನ್ ಮಾಡೂರು.



