ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್

ಎಲ್ಲರ ತಿಳುವಳಿಕೆಗೂ ಇದೆ ಆವರಣ
ಜ್ಞಾನದಿ ಮಾಡಬಹುದು ಅನಾವರಣ
ಎಲ್ಲ ತಿಳಿದಿದೆ ಎನ್ವುದೊಂದು ಅವಗುಣ
ವಿನಯಶೀಲತೆಯು ವಿದ್ಯೆಯ ಆಭರಣ
ಒಳ್ಳೆಯದೆಲ್ಲವನು ಮಾಡು ಅನುಕರಣ
ಅದುವೇ ವ್ಯಕ್ತಿತ್ವದ ನಿಜದಿ ಆರೋಹಣ
ಸಕಲ ವಿಚಾರಕ ಇರಲಪ್ಪಾ ಆಮಂತ್ರಣ
ಇರಲಿ ವಿಷಯಾಧಾರಿತವಾದ ಸಂಸ್ಕರಣ
ಕೃಷ್ಣಾ! ನಮ್ಮ ಬದುಕೇ ಒಂದು ಇಲ್ಲಣ
ಪಡದೆ ಇರಲಾರೆವು ನಾವ್ ಈಷಣ
ಇಲ್ಲಣ. ; ಜೇಡನ ಬಲೆ
ಈಷಣ ; ಅಪೇಕ್ಷೆಗಳು

———————–
ಬಾಗೇಪಲ್ಲಿ.



