ಗಜಲ್ ಸಂಗಾತಿ
ಅರುಣಾ ನರೇಂದ್ರ
ಗಜಲ್

ಕುರಿತೋದದೆ ಕಾವ್ಯ ಬರೆಯುತ್ತೇವೆ ಕನ್ನಡಿಗರು ನಾವು
ಬೇಡಿ ಬಂದರೆ ಅಭಯ ನೀಡುತ್ತೇವೆ ಕನ್ನಡಿಗರು ನಾವು
ಕಾಡು ನಾಡು ಗುಡಿಗೋಪುರಕೆ ಹೊನ್ನ ಕಳಸವಿಟ್ಟವರು
ಹಸಿದವರಿಗನ್ನವ ಹಂಚಿ ತಿನ್ನುತ್ತೇವೆ ಕನ್ನಡಿಗರು ನಾವು
ಅನ್ಯಾಯಕ್ಕೆ ಸಿಡಿದೇಳುವ ಕೆಚ್ಚೆದೆಯ ಕಲಿಗಳು ಹುಲಿಗಳು
ಸತ್ಯ ಶಾಂತಿಯ ಗೀತೆ ಹಾಡುತ್ತೇವೆ ಕನ್ನಡಿಗರು ನಾವು
ಅವರಿವವರೆನ್ನದೆ ಎಲ್ಲ ನನ್ನವರೆನುವ ಭಾವ ಎದೆಯಲಿ
ಗಡಿಯೆಡಯಲಿ ಸ್ನೇಹ ಹಸ್ತ ಚಾಚುತ್ತೇವೆ ಕನ್ನಡಿಗರು ನಾವು
ನೂರು ಮತ ನೂರು ಧರ್ಮ ವಿಧವಿಧ ಹೂವು ನಂದನ
ನೊಂದವರ ಕರುಳ ನೇವರಿಸುತ್ತೇವೆ ಕನ್ನಡಿಗರು ನಾವು
ಸಿರಿ ಸಂಸ್ಕೃತಿ ಪರಂಪರೆಯ ಹಿರಿಮೆ ಬಾನಿನೆತ್ತರ
ಭೇದ ತೊರೆದು ಬಿಗುತ್ತೇವೆ ಕನ್ನಡಿಗರು ನಾವು
ತಿಳಿಜಲವು ಸಿಹಿಜೇನು ಹಸಿರುಸಿರು ಕನ್ನಡ ಕಸ್ತೂರಿ
ದಿಕ್ಕು ದಿಕ್ಕಲಿ ಗಂಧ ಹರಡುತ್ತೇವೆ ಕನ್ನಡಿಗರು ನಾವು
ವಿಜ್ಞಾನ ವೈಚಾರಿಕತೆ ಬೆಳಕಲಿ ನಡೆಯುತ್ತಾಳೆ ಅರುಣಾ
ಕನ್ನಡ ತಾಯಿಯ ತೇರ ಎಳೆಯುತ್ತೇವೆ ಕನ್ನಡಿಗರು ನಾವು

ಅರುಣಾ ನರೇಂದ್ರ




Good one .