ಕಾವ್ಯ ಸಂಗಾತಿ
“ಹೆಣ್ಣಿನ ಅಳಲು”
ಸುಧಾ ಪಾಟೀಲ್


ಅವಳಿಗೆ ಮುಗಿಲಿನ ಕನಸಿತ್ತು
ಹಾರಾಡುವ ಹಕ್ಕಿಯ ಹಾಗೆ
ಆದರೆ ಬೀಗದ
ಬಾಗಿಲೊಳಗೆ ಬಂಧನಕೆ ಸಿಕ್ಕಳು
ಹಸಿರು ಕನಸಿನ
ನುಡಿಗಟ್ಟು ಅಲ್ಲಿಯೇ ನಿಂತಿತು
ಸಮಾಜದ ನೋಟದಲ್ಲಿ
ಅಳಿಯುತ್ತಲೇ ಹೋಯಿತು
ಕಣ್ಣೀರಲಿ ಬೆಳೆದಳು
ನಗು ಮರೆತು
ಕಾಳಜಿಯ ಹೆಸರಿನಲ್ಲಿ
ಬದುಕು ಬಿಗಿದುಕೊಂಡು
ಹಕ್ಕು ಕೇಳಿದಾಗ
ಮೌನವೇ ಶ್ರೇಯ ಎಂದರು
ಸ್ವಾತಂತ್ರ್ಯ ಬಯಸಿದಾಗ ಸಂಸ್ಕಾರ ನೆನಪಿಸಿದರು
ಆದರೂ ಅವಳ ಕಣ್ಣಿನ ಕಿರಣದಲ್ಲಿ
ದೀಪವಿದೆ
ಅವಳ ಹೃದಯದ ಧೈರ್ಯದಲ್ಲಿ
ವಿಶ್ವವಿದೆ
ಅವಳು ಅಳುತ್ತಾಳೆ
ಆದರೆ ಧೃತಿಗೆಡುವುದಿಲ್ಲ
ಅವಳು ಬಾಧೆಯನ್ನು ಭರಿಸುತ್ತಾಳೆ
ಆದರೆ ನಿಲ್ಲುವುದಿಲ್ಲ
ಹೆಣ್ಣಿನ ಅಳಲಿನಲಿ
ಶಕ್ತಿಯ ಉಸಿರಿದೆ
ಅವಳ ಮೌನದಲ್ಲೇ
ಹೊಸ ಸಮಾಜದ ಕಿರಣವಿದೆ
—————-
ಸುಧಾ ಪಾಟೀಲ




Excellent poem
Super
ಅರ್ಥಪೂರ್ಣ ಕಾವ್ಯ
ಉತ್ತರ ಕರ್ನಾಟಕದ ಅಪರೂಪದ ಕವಯಿತ್ರಿ ಸುಧಾ ಪಾಟೀಲ ಬೆಳಗಾವಿ
ನನ್ನ ಕವನ ಓದಿ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು