ಕಾವ್ಯ ಸಂಗಾತಿ
ಸರಸ್ವತಿ ಕೆ. ನಾಗರಾಜ್
“ನಾನು ಕವಿತೆ ಬರೆಯುತ್ತೇನೆ”


ನಾನು ಕವಿತೆ ಬರೆಯುತ್ತೇನೆ,
ಪ್ರಶಂಸೆಗೆಲ್ಲ, ಪ್ರಶಸ್ತಿ ಹಂಬಲದಲ್ಲ,
ಹೃದಯದ ಬಿರುಕು ತುಂಬಲು,
ನಿಶ್ಶಬ್ದದ ಅಳಿಕೆಗೆ ಶಬ್ದ ಕೊಡಲು.
ನಾನು ಕವಿತೆ ಬರೆಯುತ್ತೇನೆ,
ಯಾರ ಮೆಚ್ಚಿಗೆಗೂ ಅಲ್ಲ,
ಯಾರ ದ್ವೇಷಕ್ಕೂ ಅಲ್ಲ,
ಮನದೊಳಗಿನ ಮೌನವೇ ಪೆನ್ನಿನ ತುದಿಗೆ
ಪ್ರೇರಣೆ ತುಂಬಲು.
ನಾನು ಕವಿತೆ ಬರೆಯುತ್ತೇನೆ,
ಕಾಲ ಕಳೆಯಲು ಅಲ್ಲ,
ಜೀವಕ್ಕೆ ಅರ್ಥ ಕೊಡುವ ನೆಪದಲ್ಲಿ,
ಅಕ್ಷರಗಳ ನಡುವೆ ಉಸಿರಾಡುವ ನನ್ನ ಆತ್ಮ ಹುಡುಕಲು,
ಬದುಕಿನ ಬಿರುಗಾಳಿಗೆ ನಗು ಕೊಡಲು,
ಬಿದ್ದ ಕನಸಿಗೆ ಮತ್ತೆ ಎದ್ದೇಳುವ ಶಕ್ತಿ ನೀಡಲು.
ನೋವು ನುಂಗಿ ನಲಿಯುವ ಮನದ ಪರಿಮಳವಾಗಿ,
ಹೃದಯದ ಗಾಯವನ್ನೇ ಹೂವನ್ನಾಗಿ ರೂಪಿಸಲು.
ನಾನು ಕವಿತೆ ಬರೆಯುತ್ತೇನೆ,
ನಾನು ಜೀವಿಸಿದ್ದೆನೆಂಬ ಗುರುತು ಬಿಟ್ಟುಹೋಗಲು,
ಮೌನದಲ್ಲೂ ಮನದ ಧ್ವನಿ ಕೇಳಿಸಲೆಂದು.
————–
ಸರಸ್ವತಿ ಕೆ. ನಾಗರಾಜ್.



