ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾ ಮಗುವೇ ಬಾ ಮಗುವೆ ನೀನು ದಿನವೂ
ಹೂದೋಟವೆಂಬ ಸಂತಸದ ಶಾಲೆಗೆ ಕ್ಷಣವೂ
ಜ್ಞಾನ ದೇಗುಲವೇ ನಿನ್ನ ಕೈಬೀಸಿ ಕರೆದಿಹುದು
ನೀ ಬರುವ ದಾರಿಯನೇ ಅದು ಕಾಯುತಿಹುದು//

ವಿದ್ಯೆ ಎಂಬ ಬಂಗಾರ ನೀ ಇಲ್ಲಿ ಪಡೆದು
ಸರ್ವರ ಪ್ರೀತಿಯನು ಬಾಳಲಿ ಗಳಿಸಿ ಮೆರೆದು
ಸುಜ್ಞಾನಿ ಎಂಬ ಮರವಾಗಿ ನೇರ ಬೆಳೆದು
ಸರ್ವರ ಬಾಳಿನಲಿ  ನೆರಳಾಗಿ ಸದಾ ಉಳಿದು //

ಆಟದ ಜೊತೆಗೆ ಪಾಠವನೂ ಕಲಿತು
ಗುರುಗಳ ಮನದಲಿ ನಿತ್ಯವೂ ಕುಳಿತು
ತಾಯಿ ಶಾರದೆಯ ಒಡಲೊಳು ನಲಿದು
ಬಾ ಮಗುವೇ ಶಾಲೆಗೆ ನಿತ್ಯ ಕುಣಿ ಕುಣಿದು//

ಬರುವೆನು ಎಂದು ಬಳಪವ ಹಿಡಿದು
ಅಮ್ಮಾ ಎನ್ನುತ ಆಗಾಗ ಕರೆದು
ಓದಲು ಬರೆಯಲು ಆಸರೆ ಪಡೆದು
ಹಿರಿಯಗೂ ಕಿರಿಯಗೂ ಪ್ರೀತಿಯ ಮೊಗೆದು//

ಮುಂದಿನ ನಾಯಕ ನೀನಾಗುವೆ ತಾಳು
ದೇಶದ ಒಳ್ಳೆಯ ಪ್ರಜೆಯಾಗಿ ಬಾಳು//


About The Author

Leave a Reply

You cannot copy content of this page

Scroll to Top