ಕಾವ್ಯಸಂಗಾತಿ
ರಾಶೇ ಬೆಂಗಳೂರು
“ಚಿತ್ತ ಚಂಚಲೆ”

ಎಳೆ ದಾರದಲಿ
ಕೋಮಲ ಕೆನ್ನೆಗಳಿಗೆ
ಸವಿ ಮುತ್ತುಗಳ
ಪೋಣಿಸಿರುವೆ..
ಹರ್ಷೋಲ್ಲಾಸದಲಿ
ಸಖಿ ವಿಹರಿಸುತಾ
ಚಿತ್ತ ಭ್ರಮೆಯಲಿ
ವಿರಮಿಸುವೆ..
ಹುಡುಗಾಟಕೆ
ನಾ ಕೆರಳಿಹೆನು
ಸಂಭ್ರಮದುಯ್ಯಾಲೆ
ಏರಿ ತೇಲುಹೆನು..
ಸವಿ ಸಿಹಿ ಮಧುರ
ನೆನಪುಗಳಾ
ತೋರಣದಲಿ
ನಾ ಬಂಧಿಯಾಗಿಹೆನು

———————————————————-
ರಾಶೇಬೆಂಗಳೂರು



