ಕಾವ್ಯ ಸಂಗಾತಿ
ಎಮ್ಮಾರ್ಕೆ
“ಮುಖವಾಡ”

ಮುಖಗಳಿಗಿಂತ ಮುಖವಾಡಗಳ
ಜೊತೆಗೇ ಬದುಕು ಕಳೆದಿದ್ದೇವೆ,
ಸಮಯ,ಸಂದರ್ಭಗಳಿಗೆ ತಕ್ಕಂತೆ
ಮುಖವಾಡವನ್ನು ತಳೆದಿದ್ದೇವೆ
ಮುಖಗಳೆಲ್ಲವು ತೋರಬಾರದಷ್ಟು
ಖರಾಬಾಗಿವೆಯಾ? ಎನಿಸುತ್ತದೆ,
ಹುಚ್ಚು ಮನಸು ಮುಖ ಮುಚ್ಚಿಟ್ಟು
ಮುಖವಾಡ ಹೊತ್ತು ಕುಣಿಸುತ್ತದೆ
ಅಸಲಿಯತ್ತನು ಅಡಗಿಸಿಟ್ಟು ಇಲ್ಲಿ
ಯಾರೊಬ್ಬರು ಏನನು ಪಡೆದಿಲ್ಲ,
ನಕಲಿಯದು ನಶೆಯೊಳಗೆ ನೆಟ್ಟಗೆ
ನಾಲ್ಕು ಹೆಜ್ಜೆಯನೂ ನಡೆದಿಲ್ಲ
ಬಗೆಬಗೆಯ ಮುಖವಾಡದೊಳಗೆ
ಮುಖಗಳ ಹುದುಗಿಸಿದ್ದು ಸಾಕು,
ಒಬ್ಬರ ಮುಖವ ಒಬ್ಬರು ಪರಸ್ಪರ
ಇನ್ನಾದರೂ ನೋಡಲೇ ಬೇಕು

ಎಮ್ಮಾರ್ಕೆ




ಚೆನ್ನಾಗಿದೆ.