ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
“ಪ್ರೀತಿಯ ಸಾಲು”

ಪ್ರತಿ ಸಾಲು ನಿನ್ನಲ್ಲಿ ಪ್ರೀತಿಯನೆ ಬೇಡುತಾ
ಹಾಡುವೆ ಕೇಳು ನನ್ನದೇ ಹಾಡು
ಮನದಲ್ಲಿ ಇರಿಸಿದ ನೋವಿನ ಸಾಲು
ಹೇಳದೆ ನಿನಗೆ ಹಾಡಿದೆ ಕೇಳು
ಅಂದೊಮ್ಮೆ ಬರೆದಿಹ ಪ್ರೇಮದ ಪತ್ರ
ಓದದ ನೀನು ಆ ಪ್ರೀತಿಯ ಸಾಲು
ಬರೆದಂತ ಬರಹವು ನಗುತಲಿದೆ ಇಂದಿಗೂ
ಹೇಳುವುದು ಹೇಗೆ ಓದದೆ ನೀನು
ನೀ ಬಿರೋ ನಗುವಿನಲ್ಲಿ ಅದೇನಿಹುದೊ ಮಾಯೆಯೋ
ಮಾತೆಂದೂ ಆಡದ ಆ ನಿನ್ನ ಛಾಯೆಯೋ
ಆಸೆಗಳು ಮುಗಿಲೇರಿ ಸೇರಿದೆ ಮೋಡದಲ್ಲಿ
ಆ ನಿನ್ನ ಛಾಯೆಯೂ ಮೂಡಿದೆ ಬಾನಿನಲ್ಲಿ
ಕೊಡಲೇನು ನನಗೆ ಏನಿಹುದು ನಿನ್ನಲ್ಲಿ
ಪ್ರೀತಿಯೊಂದೆ ಸಾಕು ಬದುಕಿನಲ್ಲಿ
ಇರಲೇನು ನಾನು ನಿನ್ನವನಾಗಿ
ಆ ನಿನ್ನ ಬಾಳಿನ ಜೀವವಾಗಿ

ಮನ್ಸೂರ್ ಮುಲ್ಕಿ



