ಕಾವ್ಯ ಸಂಗಾತಿ
ಪೃಥ್ವಿ ಬಸವರಾಜ್
“ಕೃಷಿ ವಿಜ್ಞಾನ“

ಮಣ್ಣು ಗಾಳಿ ನೀರು ಬೆಳಕು
ಇವೆಲ್ಲವೂ ನಮ್ಮ ಬೆಳೆಸುವ ತಾಯಿ
ವಿಜ್ಞಾನ ಇದರೆಲ್ಲದರ ಮಾಹಿ
ಸೂರ್ಯ ಚಂದ್ರ ನಕ್ಷತ್ರಗಳ
ಬೆಳಗಿನ ಹೊಳೆಹರಿದು
ನಮ್ಮ ಬೆಳೆ ಬೆಳೆದು
ಅಜ್ಞಾನವ ಕಳೆದು
ವಿಜ್ಞಾನದೆಡೆಗೆ ನಡೆದು
ಮಣ್ಣಿನ ಫಲವತತೆಯ ಕಾಪಾಡೋಣ
ಬಿತ್ತನೆಗೆ ಮೊದಲು ಮಣ್ಣನ್ನು ಪರಿಚಯಿಸಿ
ಜ್ಞಾನದಿಂದ ಕೃಷಿಯ ಮಾಡೋಣ
ಸತ್ತಿರುವ ಮಣ್ಣನ್ನು ಜೀವಂತ ಮಾಡೋಣ
ರಾಸಾಯನಿಕ ಪದಾರ್ಥಗಳ ಬಳಕೆ ನಿಲ್ಲಿಸಿ
ಪ್ರಾಣಿ ಪಕ್ಷಿಗಳಿಗು ಆಧಾರವಾಗೋಣ
ಅಲ್ಲಲ್ಲಿ ಬದುಗಳ ನಿರ್ಮಿಸಿ
ಮಣ್ಣಿನ ಸವಕಳಿ ತಡೆಯೋಣ
ನೀರನ್ನು ಮಿತವಾಗಿ ಬಳಸಿ
ಅಂತರ್ಜಲ ಮಟ್ಟವನ್ನು ಹೆಚ್ಚಿಸೋಣ
ಇದೆಲ್ಲದಕ್ಕೂ ನಾವು ಅಜ್ಞಾನದಿಂದ
ವಿಜ್ಞಾನದ ಎಡೆಗೆ ನಡೆಯೋಣ
ನಮ್ಮ ದೇಶದ ಆಸ್ತಿ ರೈತರ ಬೆಳೆಸಿ ಉಳಿಸೋಣ.

ಪೃಥ್ವಿ ಬಸವರಾಜ್



