ಸಂವಿಧಾನ ಸಂಗಾತಿ
ಗಾಯತ್ರಿ ಸುಂಕದ
“ನಮ್ಮ ಸಂವಿಧಾನ”


ನಮ್ಮ ಸಂವಿಧಾನ ನಮ್ಮ ದೇಶದ ಆಡಳಿತದ ಚುಕ್ಕಾಣಿಯನ್ನು ನಿರ್ಧರಿಸುತ್ತದೆ. ನಮ್ಮ ಸಂವಿಧಾನ ನನ್ನದೇ ಆದ ಘನತೆಯನ್ನು ಹೊಂದಿದೆ. ಇದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಆಗಿದೆ.
ಜನವರಿ 26 , 1950ರಿಂದ ಅಂಗೀಕರಿಸಲ್ಪಟ್ಟ ನಮ್ಮ ಸಂವಿಧಾನ We the people of India ಎಂದು ಪ್ರಾರಂಭವಾಗಿ ಅನೇಕ ಗುಣ ಲಕ್ಷಣಗಳನ್ನು ಹೊಂದಿದೆ.
ಅನೇಕ ಬಾರಿ ತಿದ್ದುಪಡಿಯಾಗ್ಗಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ನಮ್ಮನ್ನು ಆಳುವವರಿಗೆ ಸೂಕ್ತ ಮಾರ್ಗ ದರ್ಶನ ನೀಡುತ್ತಿದೆ.
ಸಂಸದೀಯ ಪ್ರಜಾಪ್ರಭುತ್ವ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ವಯಸ್ಕ ಮತ ದಾನ ಮುಂತಾದ ಅಂಶಗಳನ್ನು ಹೊಂದಿ ಸುಮಾರು 22 ಅಧ್ಯಾಯಗಳು ಮತ್ತು 490ಕ್ಕಿಂತಲೂ ಹೆಚ್ಚು ಆರ್ಟಿಕಲ್ ಹೊಂದಿ ಸಂವಿಧಾನ ನಮ್ಮ ಸರಕಾರ ಮತ್ತು ಜನರನ್ನು ಬೆಸೆಯುವ ಕೊಂಡಿ ಯಾಗಿದೆ.
ಜಗತ್ತಿನ ಎಷ್ಟೋ ದೇಶಗಳಲ್ಲಿ ನಿರಂಕುಶ ಅಧಿಪತಿ ಗಳು, ಮಿಲಿಟರಿ ಸರ್ಕಾರ ನೋಡಿದ ನಾವು ನಮ್ಮ ದೇಶದಲ್ಲಿ ಈಗಲೂ ಸರ್ಕಾರವನ್ನು ಸರಿಯಾದ ಟ್ರಾಕಿನಲ್ಲಿ ಇದ್ದರೆ ಅದಕ್ಕೆ ಕಾರಣ ಸಂವಿಧಾನ ಎನ್ನ ಬಹುದು. .
ಸಂವಿಧಾನ ರಚನೆಯ ಆರಂಭ 1949 ನವೆಂಬರ್ 26. ರಿಂದ ಶುರು ವಾಗಿದ್ದ ಕಾರಣ ದಿಂದಲೇ ನಾವು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ 26 ರನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ.
ಗಾಯತ್ರಿ ಸುಂಕದ



