ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನರಕ ಈಗ ಖಾಲಿ”


ನರಕ ಈಗ ಖಾಲಿ
ಖಾಲಿ
ಬಿಕೋ ಎನ್ನುತ್ತಿದೆ
ಯಮನ ಆಸ್ಥಾನ
ಅಲ್ಲಿಯ ರಕ್ಕಸರಿಗೆ ಈಗ
ರಜೆ ಸಿಕ್ಕಿದೆಯಂತೆ
ಅವರೆಲ್ಲ ಇಲ್ಲಿ
ಸಂಸತ್ತು ವಿಧಾನ ಸಭೆಯ
ಚರ್ಚೆಯಲ್ಲಿ ಮುಳುಗಿದ್ದಾರೆ
ಇಲ್ಲಿನ ವೈದ್ಯರು ಇಂಜನೀಯರ್
ಕಂಟ್ರಾಕ್ಟರ್
ಬಂಡವಾಳಶಾಹಿಗಳು
ಕ್ರೂರ ಸುಲಿಗೆ ಶೋಷಣೆ
ಹಪ್ತಾ ವಸೂಲಿ
ಮಾಡುತ್ತಿದ್ದಾರೆ
ಸಬ್ ಕೆ ಸಾಥ್
ಸಬ್ ಕಾ ವಿಕಾಸ
ವರ್ಷಕ್ಕೊಮ್ಮೆ
ಧ್ವಜ ಹಾರಿಸುವ ನಾವು
ರಾಷ್ಟ್ರ ಭಕ್ತರು
ನರಕವೀಗ ಸ್ವಚ ಸರಳ
ಭೂಮಿಯ ತುಂಬೆಲ್ಲಾ
ನರಕದ ಅಂಗಡಿಗಳು
ನಿತ್ಯ ನಿರಂತರ
ವ್ಯಾಪಾರ ನಡೆಸಿವೆ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ವಾಸ್ತವತೆಯ ಭೀಕರ ಅನಾವರಣದ ಕವಿತೆ ಇದು.