ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನೀನಿಡುವ ಹೆಜ್ಜೆಯ ಸದ್ದು
ಕಿವಿಗೀಗ ಕೇಳುತ್ತಿಲ್ಲ
ತಂಬೆಲರಿನ ತಂಗಾಳಿಯ‌
ಮಕರಂದದಲಿ ನಿನ್ನ ಮೈಯ್ಯ
ಬೆವರಿನ ಘಮವಿಲ್ಲ

ನನ್ನೆರಳ ದುಂಡುಮಲ್ಲಿಗೆ
ಕಂಪ ಸೂಸುತ್ತಿಲ್ಲ
ನನ್ನ ಎಡಗಣ್ಣಿನ ಕಾಡಿಗೆಗೆ
ನಿನ್ನ ಬಲಗಣ್ಣ ತುಂಟಾಟ
ಕಾಣುತ್ತಿಲ್ಲ

ಎಗ್ಗಿಲ್ಲದೇ ಹರಟುತ್ತಿದ್ದ
ಎದೆಯುಸಿರಿನ ಎರಿಳಿತಗಳು
ತಮ್ಮೊಡನೆ ಕುಶಲೋಪಚರಿ
ನಡೆಸುತ್ತಿಲ್ಲ

ಮನದ ಬಾಗಿಲಿನ‌ ತೋರಣ
ಒಣಗುತಿದೆ
ಮನದಂಗಳದ
ರಂಗೋಲಿ ಮಾಸುತ್ತಿದೆ
ಹಸನಾಗಿರುತ್ತಿದ್ದ ಮನದಂಗಳ
ಇಂದು ಅಮಂಗಳ

ಸಂದು ಗೊಂದುಗಳಲಿ
ಇಣುಕಿ ಕೆಣಕಿ ಕೆರಳಸಿ
ಅರಳಿಸಿ ಕೊಬ್ಬ ಕರಗಿಸಿ
ಬೆವರಿಳಿಸುತ್ತಿದ್ದ ಕತ್ತಲೆಗಿನ್ನೂ
ಬೆಳಕಾಗಿಲ್ಲ

ಬೆವೆತ ಬೆನ್ನಮೇಲೆ ಬೆರಳಾಡಿಸಿ
ಬಸವಳಿಸಿ
ಚಣಚಣದಿ ಚರಣ ಗಳನೇ ನುಡಿಸಿ
ಉಸಿರ ಎರಿಳಿತಗಳ
ಎರುಪೇರಾಗಿಸಿ ಮುಸಿ ಮುಸಿ
ನಗುತ್ತಿದ್ದ ಕೋಣೆಯಲ್ಲಿಗ
ನಗುವಿನ ಸುಳಿವಿಲ್ಲ

ಕಣಿವೆಗಳ ಎರಿಳಿತದಲಿ
ಕೊರಕಲು.ಕುರುಚಲು ಹುಲ್ಲು
ಆಳವಾದ ಕಂದಕ.ಇರುವಂತೆ
ಬದುಕಿನಲೂ ಕಂದಕ ಗಳುಂಟು
ಬಿಟ್ಟಾಕು ಜಗಳಗಳ

ಆರುಮೆಗೆ ಅಸೂಯೆಯೇ ?
ಪ್ರೀತಿಯ ಪ್ರಣತಿಯಲಿ
ವೈರತ್ವದ ಸೊಡರೇ ?
ಬೆಳಕಿಲ್ಲದ ಮನದ ದೀವಿಗೆ
ಪ್ರಕಾಶಿಸುವವದು ಹೇಗೆ ?

ಸಿಟ್ಯಾಕ ಸೆಡುವ್ಯಾಕ ನನರಾಯ
ಕಟ್ಯಾಕಿ ಬಿಡತೀನಿ ನಿನ್ನ ಕಾಯ
ಸಿಟ್ಟು ಸೆಡುವು ಕೋಪ ತಾಪ
ಆಗೋಗಿ ಬಿಡಲಿ ಮಟಮಾಯ

ಆರುಮೆಯ ಅರಿವಿನಲಿ
ನೂರಡಿ ನಡೆದೆ
ಆರಡಿಯ ಮನೆ ಆಹ್ವಾನ
ನೀಡುವ ಮುನ್ನ ಬಂದುಬಿಡು
ಒಮ್ಮೆ

———————

About The Author

Leave a Reply

You cannot copy content of this page

Scroll to Top