ಕಾವ್ಯ ಸಂಗಾತಿ
ಎಮ್ಮಾರ್ಕೆ
“ಅಪರೂಪದ ಆಜಾದ್”


ಮೌಲಾನಾ ಅಬ್ದುಲ್ ಕಲಾಂ ಆಜಾದರು
ಜನಿಸಿದ ದಿನವದು ನವ್ಹೆಂಬರ್ ಹನ್ನೊಂದು,
ಸ್ವಾತಂತ್ರ್ಯ ಹೋರಾಟಗಾರ,ಶಿಕ್ಷಣ ಮಂತ್ರಿ
ಸವಿನೆನಪಿಗೆ ರಾಷ್ಟ್ರೀಯ ಶಿಕ್ಷಣ ದಿನವಿಂದು
ಆಜಾದ್ ಎಂಬ ನಾಮಾಂಕಿತದಿ ಬರೆದು
ಅಲ್ ಹಿಲಾಲ್ ಪತ್ರಿಕೆಯ ಹೊರತಂದವರು,
ಧರಾಸಣಾ ಸತ್ಯಾಗ್ರಹವನು ಆಯೋಜಿಸಿ
ಸ್ವದೇಶಿ,ಸ್ವರಾಜ್ ಚಿಂತನೆಯ ಪರಿಪಾಲಕರು
ಸಮಾಜವಾದಿ ನಿಲುವು ತಾಳಿ ಬಡತನ
ಅಸಮಮಾನತೆಯ ವಿರುದ್ಧ ಗುಡುಗಿದರು,
ಏಕಮೇವ ಮುಸ್ಲಿಂ ಸಿದ್ಧಾಂತ ವಿರೋಧಿಸಿ
ಹಿಂದೂ ಮುಸ್ಲಿಂ ಭಾವೈಕ್ಯತೆಗೆ ದುಡಿದವರು
ಹತ್ತಲವು ಭಾಷೆಯ ಪಾಂಡಿತ್ಯ ಪಡೆದು
ಸುಭದ್ರ ಸುಭಿಕ್ಷ ಆಡಳಿತವ ನಡೆಸಿದವರು
ದೇಶದ ಏಳಿಗೆಗೆ ಅನವರತವು ಶ್ರಮಿಸಿ
ನನ್ನಯ ಕವಿತೆಗೆ ಸಿಹಿ ಸಿಹಿ ತಿರುಳಾದವರು
———
ಎಮ್ಮಾರ್ಕೆ



