ಕಾವ್ಯ ಸಂಗಾತಿ
“ಅನ್ನದಾತೋ ದುಃಖೀಭವ”
ಎಮ್ಮಾರ್ಕೆ

ಅನ್ನದಾತಗ ಸುಖಾ ಅನ್ನೋದು ಎಲ್ಲೈತಿ ಹೇಳರಿ
ಕಂಗಾಲಾದ ಮಣ್ಣಿನ ಮಗನ ಕಷ್ಟ ಸುಖಾ ಕೇಳರಿ
ಹುಬ್ಬ ಹಾರಿಸಿ ನೋಡುವ್ಹಂಗ ಕಬ್ಬು ಬೆಳದಾನರಿ
ಕಬ್ಬಿನ ಬಿಲ್ ಕಮ್ಮಿ ಕೊಡ್ತಾರ ಕುಂತ ಅಳತಾನರಿ
ಬೀದಿಗಿಳಿದು ಹೋರಾಡುವಂತ ಪರಿಸ್ಥಿತಿ ಬಂದೈತಿ
ಭರವಸೆ ಇಟ್ಟ ರೈತನ ಬದುಕು ಬೆಂಕ್ಯಾಗ ನಿಂತೈತಿ
ಸರ್ಕಾರ ಕೂಡ ಕಂಡು ಕಂಡು ಕಣ್ಮುಚ್ಚಿ ಕುಂತೈತಿ
ಮಾತಿನ್ಯಾಗ ರೈತನೇ ದೇಶದ ಬೆನ್ನೆಲುಬ ಅಂತೈತಿ
ಹರಿಸಿದ ಬೆವರು,ಸುರಿಸಿದ ಕಣ್ಣೀರಿನ ಕಥಿ ಕೇಳರಿ
ಅನ್ನದಾತಗ ಬೆಂಬಲ ನೀಡಿ ಜೊತೆಯಲಿ ಬಾಳರಿ
ಅನ್ನದಾತೋ ಸುಖೀಭವ ಅನ್ನೋದೆಲ್ಲ ಸುಳ್ಳೆ ಐತಿ
ಅನ್ನದಾತೋ ದುಃಖೀಭವ ಅನ್ನೋದೀಗ ಖರೆ ಐತಿ
ಎಮ್ಮಾರ್ಕೆ




