ಕಾವ್ಯ ಸಂಗಾತಿ
ಅನುರಾಧ ರಾಜೀವ್
ಗೆಜ್ಜೆನಾದ


ಕಿಲಕಿಲ ನಗುವಲಿ ಮಗುವಿನ ತೇಜಕ
ಕಲರವ ತಂದಿದೆ ಸೊಬಗು
ಚಿಲಿಪಿಲಿ ಹಕ್ಕಿಯ ಹಾಡಿಗೆ ನಲಿದಿದೆ
ಚೆಲುವಿನ ಬಣ್ಣದ ಬೆರಗು
ಚಿಗುರಿದೆ ಪ್ರೇಮದ ತರುಲತೆ ಬಳ್ಳಿಯು
ಬೀಗುತ ಸುಂದರ ಗಳಿಗೆ
ಕೋಗಿಲೆ ಹಾಡಿದೆ ಸುಮಧುರ ಗೀತೆಯ
ಕೂಗುತ ನಲ್ಲೆಯ ಬಳಿಗೆ
ಒಲವಿನ ಕರೆಯಲಿ ತಿಳಿಯದ ಭಾವನೆ
ಗಿಲಿಗಿಲಿ ಗೆಜ್ಜೆಯ ಸದ್ದು
ಸಲಿಲದ ಸಿಂಚನ ಮಿಡಿದಿದೆ ಎದೆಯಲಿ
ಪಳಪಳ ಮುತ್ತಿನ ಬಿಂದು
ಅನುರಾಧಾ ರಾಜೀವ್ ಸುರತ್ಕಲ್



