ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ ಅವರ ಕವಿತೆ
“ಲಂಗ್ ತ”

ಪಂಚ ವರ್ಣಗಳು ಪಂಚ ಭೂತಗಳ ಆವಿರ್ಭಾವಗಳು
ಶಾಂತಿ ಸಂದೇಶಗಳು ಶುಭಾಶೀರ್ವಾದಗಳು
ಮೆರೆಯುತ್ತಾ ಪರ್ವತ ಗಿರಿಯಲ್ಲಿ ಮರ ಗಿಡಗಳಲ್ಲಿ
ಪಂಚ ವರ್ಣಗಳು ಶುಭ ಅದೃಷ್ಟದ ಹಾರೈಕೆಗಳು
ಸ್ವಾಗತಿಸುತ್ತ
ನಮಗೆಲ್ಲ ಪ್ರೀತಿಯ ಹಂಚುತ್ತ
ನಿಂತ ಲಂಗ್ ತಾ ಧ್ವಜಗಳು ಸಂಕೇತಗಳು ಶುಭಾಶಯಗಳು
ಬಣ್ಣ ಬಣ್ಣದ ಬಟ್ಟೆಗಳು
ಹೃದಯದಾಳ ಬಸಿಯುತ್ತ ನಡೆಸುತ್ತೆ ಅಮೃತ ಸಿಂಚನ.
ವಂದನೆಗಳು ನಿಮಗೆ ಮೇಲೆ ಹಿಮಾಲಯ ಸೀಮೆಯ ಬೌದ್ಧರಿಗೆ
ಲಂಗ್ ತ ದ ಆರಾಧಕರಿಗೆ !
ಡಾ ಡೋ ನಾ ವೆಂಕಟೇಶ




