ಗಜಲ್ ಸಂಗಾತಿ
ಎಮ್ಮಾರ್ಕೆ ಅವರ ಹೊಸ
ಗಜಲ್


ಕಾಮದಿ ಕಣ್ಣು ಮಂಜುಗಟ್ಟಿದೆ ಮರುಳ
ಕ್ರೋಧದಿ ಜಗವು ಜಿಡ್ಡುಗಟ್ಟಿದೆ ಮರುಳ
ಮೂರು ಬಿಟ್ಟವರಿಗಿಲ್ಲಿ ಸುಖದ ಸೂರು
ಲೋಭದಿ ಲೋಕ ಲಜ್ಜೆಗೆಟ್ಟಿದೆ ಮರುಳ
ದುರ್ಗುಣಗಳೇ ದುಪ್ಪಟ್ಟಾಗಿ ನಿಂತಿಹವು
ಮೋಹದಿ ಮಾಯೆ ಅಡ್ಡಗಟ್ಟಿದೆ ಮರುಳ
ದೂರಿದಷ್ಟು ದುರುಳರು ಇನ್ನಷ್ಟು ಹತ್ತಿರ
ಮದದಿ ಮಾಯೆ ಸುತ್ತುಗಟ್ಟಿದೆ ಮರುಳ
ಕುಂಬಾರ ಕಣ್ಣಿದ್ದರೂ ಕುರುಡನಾಗಿದ್ದಾನೆ
ಮತ್ಸರದಿ ಮನವು ಹೆಪ್ಪುಗಟ್ಟಿದೆ ಮರುಳ
——————————-
ಎಮ್ಮಾರ್ಕೆ



