ಸಂಗಾತಿ ವಾರ್ಷಿಕ ವಿಶೇಷ
ಗಾಯತ್ರಿ ಸುಂಕದ
ಸಾಮಾಜಿಕ ಜಾಲತಾಣಗಳು
ಮತ್ತು ಮಹಿಳೆಯರು


ಹಲೋ
ನಾವೀಗ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ್ತಿಲಲ್ಲಿ ಇದ್ದೇವೆ.ಹೀಗಾಗಿ ನಾವು ನಮ್ಮ ಜೀವನದಲ್ಲಿ ಸಾಮಾಜಿಕ ಜಾಲ ತಾಣಗಳ ಪಾತ್ರವನ್ನು ಅಲ್ಲ ಗೆಳೆಯುವಂತಿಲ್ಲ.
ಸಂದೇಶಗಳನ್ನು ಕಳಿಸಲು, ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳು ನಮ್ಮ. ಮೊಬೈಲ್ನಲ್ಲಿ ಆ್ಯಪ್ ನ ರೂಪದಲ್ಲಿ. ಬಂದು ಕುಳಿತಿರುತ್ತವೆ.
ವಾಟ್ಸಾಪ್,ಫೇಸ್ಬುಕ್, Instragram, ಯು ಟ್ಯೂಬ್ ಮುಂತಾದವು ನಮ್ಮ ಜೀವನದ ಅವಿಭಾಜ್ಯ ಅಂಗಗಳು ಆಗಿ ಬಿಟ್ಟಿವೆ.
ಈಗಿನ ಕಾಲ ದಲ್ಲಿ ವಾಟ್ಸಾಪ್ ತುಂಬ ಕಾಮನ್ ಆಗಿದೆ. ಒಂದು ಹೊಸ ಸೀರೆ ತೆಗೆದು ಕೊಂಡರೂ, ಅದನ್ನು ಸ್ಟೇಟಸ್ ಹಾಕಿ ಖುಷ್ ಪಡುವವರು ಉಂಟು.ಎಲ್ಲಾದರೂ ಟ್ರಿಪ್ ಹೋಗಿ ಬಂದು ಸ್ಟೇಟಸ್ ಹಾಕಿ ಫೋಟೋ ಅಪ್ಲೋಡ್ ಮಾಡುವವರನ್ನು ಕಾಣುತ್ತೇವೆ.
ನಮ್ಮ ವೃತ್ತಿ ಜೀವನದ ಗ್ರೂಪ್, ಬಂಧುಗಳ ಗ್ರೂಪ್, ಭಜನಾ ಮಂಡಳಿ ಗ್ರೂಪ್. ಮುಂತಾದವುಗಳನ್ನು. ನಾವಿಲ್ಲಿ ಕಾಣುತ್ತೇವೆ.
ಮಹಿಳೆಯರ ಮತ್ತೊಂದು ಬೆಸ್ಟ್ ಫ್ರೆಂಡ್ ಅಂದರೆ ಅದು ಫೇಸ್ಬುಕ್ ವೆಂದು ಹೇಳ ಬಹುದು. ಎಷ್ಟೋ ಉದಯೋನ್ಮುಖ ಲೇಖಕಿಯರಿಗೆ ಲೇಖಕಿಯರ ಗ್ರೂಪ್ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಅನಾವರಣ ಮಾಡುತ್ತಾರೆ. ಪೇಪರ್ನವರು ಅವರು ಬರೆದ ಆರ್ಟಿಕಲ್ ರಿಜೆಕ್ಟ್ ಮಾಡಿದರೆ ನಿಮ್ಮ ಗಂಟು. ಅಲ್ಲ, ನಿಮ್ಮಪ್ಪನ ಗಂಟು ಅಲ್ಲ ಎಂದು ಫೇಸ್ಬುಕ್ ಗೆ ಅಪ್ಲೋಡ್ ಮಾಡಿ, ಓದುಗರು ಸಿಕ್ಕಿದರಲ್ಲ ಎಂದು ಖುಷಿ ಪಡುತ್ತಾರೆ. ಕೆಲವರು quora ದಂತಹ ವೆಬ್ಸೈಟ್ಗೆ ಬರೆದು ತಮ್ಮದೇ ಆದ ಇಮೇಜ್ ಸೃಷ್ಣಿಸಿ ಕೊಂಡು ಬಿಡುತ್ತಾರೆ.
ಎಷ್ಟೋ ಮಹಿಳೆಯರು, ಟೈಲರಿಂಗ್, ಎಂಬ್ರಾಯ್ಡರಿ, , ಬ್ಯುಟಿ ಪಾರ್ಲರ್ಗೆ ಮಾರುಕಟ್ಟೆಯನ್ನು ಮಾಡಿಕೊಳ್ಳುತ್ತಾರೆ. ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಪಾತ್ರ ವಹಿಸುತ್ತದೆ.
ಯೂಟ್ಯೂಬ್ ಎಷ್ಟೋ ಮಹಿಳೆಯರಿಗೆ ಆರ್ಥಿಕ ಸ್ವಾವಂಬನೆಗೆ ದಾರಿ ಮಾಡಿ ಕೊಡುತ್ತದೆ. ಎಷ್ಟೋ ಮಹಿಳೆಯರು ಅಡುಗೆ ಅರಮನೆ ಯಂತಹ ಅಡುಗೆರೆಸಪಿ ಮಾಡಿ ದುಡ್ಡು ಗಳಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.
ಎಷ್ಟೋ ಯುವತಿಯರು ರೀಲ್ಸ್ ಮಾಡಿ ಅಪ್ಲೋಡ್ ಮಾಡಿ ರಿಯಾಲಿಟಿ ಶೋ, ಕಂಪನಿಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ನಮ್ಮ ಹತ್ತಿರದ ಸಂಬಂಧಿಗಳೇ ಮೂಗು ಮುರಿದಾಗ, ಫೇಸ್ಬುಕ್ ಫ್ರೆಂಡ್ಸ್ ಮಾಡಿಕೊಂಡು, ತೀರ್ಥ ಯಾತ್ರಿಗಳಿಗೆ ಹೋಗಿ ಬರುವುದು,, ಹೊಸ ಸ್ನೇಹಿತೆಯರ ಜೊತೆಗೆ ಖುಷಿ ಹಂಚಿ ಕೊಳ್ಳುವುದು, ಮನೆಯ ಫಂಕ್ಷನ್ ಆದಾಗ ಫೋಟೋ ಅಪ್ಲೋಡ್ ಮಾಡಿ. ಲೈಕ್ಸ್ ಮತ್ತು ಕಾಮೆಂಟ್ಸ್ ನೋಡಿ ಖುಷಿ ಪಡುವುದು. ಸಾಮಾನ್ಯ.
ಎಷ್ಟೋ ವಧುವರ ವೇದಿಕೆ,job portal ಗಳು, ಮನೆ ಮದ್ದು,, ಇವುಗಳು ನಮ್ಮ ಭಾರವನ್ನ್ನು ಎಷ್ಟೋ ಇಳಿಸಿವೆ ಎಂದು ಹೇಳ ಬಹುದು.
ಈಗಲೂ ಸಂಗಾತಿ ವಾಟ್ಸಾಪ್ ಗ್ರೂಪ್ ನಲ್ಲಿ ಬರುವ ನನ್ನ ಲೇಖನಗಳಿಂದಲೇ ನನ್ನನ್ನು ಎಷ್ಟೋ ಜನ ಗುರುತಿಸಿದ್ದಾರೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಮಹಿಳೆಯರ ಬಗ್ಗೆ ದೃಷ್ಟಿ ಕೋನ ಬದಲಾಗುವಂತೆ ಮಾಡಿವೆ ಎಂದು ಹೇಳ ಬಹುದು
ಏನಂತೀರಿ?
ಗಾಯತ್ರಿ ಸುಂಕದ



