ದೀಪಾವಳಿ ವಿಶೇಷ
ಪ್ರೊ. ಶಕುಂತಲಾ.ಚನ್ನಪ್ಪ. ಸ
ಹಬ್ಬಗಳ ರಾಜ ದೀಪಾವಳಿ.

ಆಯಸ್ಕಾಂತದಂತೆ ಸರ್ವಾಕರ್ಷವು
ನಾಡಿನ ವರ್ಣಮಯ ದೀಪಾಲಂಕಾರವು/ಪ/
ಗಂಧರ್ವಲೋಕ ಸ್ರಜಿಸುವಂತಿಹುದು
ಕಣ್ಮನ ಹ್ರೃದಯಾನಂದ ಪ್ರತಿರೂಪವು
ಜ್ಞಾನದೀವಿಗೆಯಂತೆ ಪ್ರಜ್ವಲಿಸುತಲಿಹುದು
ದೇಶಿ ಸೊಗಡಿನ ಸ್ನೇಹ-ಸಮ್ಮಿಲನವು/೧/
ವಿಶೇಷ ಹಿರಿಯ ಹಬ್ಬ ದೀಪಾವಳಿಯು
ಚೈತನ್ಯದ ಚಿಲುಮೆಯಂತೆ ಸ್ಪೂರ್ತಿಯ ಸೆಲೆಯು
ರಂಗುರಂಗಿನ ಆಕಾಶಬುಟ್ಟಿಯ ಸೊಗಡು
ಲೌಕಿಕ ಆಧ್ಯಾತ್ಮಿಕ ಬೀರುವ ಸಂದೇಶವು /೨/
ನೀರು ತುಂಬುವ ಹಬ್ಬದ ಸಡಗರವು
ನರಕಾಸುರವಧೆಯ ನರಕಚತುರ್ದಶಿಯು
ಮಹಾಲಕ್ಷ್ಮೀ ಪೂಜೆಯ ದೀಪೋತ್ಸವವು
ಪಾಡ್ಯಮಿ ವ್ಯಾಪಾರಸ್ಥರ ಮಹೋತ್ಸವವು/೩/
ಸಹಸ್ರ ಗೋಪಿಕಾಸ್ತ್ರೀಯರ ಬಿಡುಗಡೆಯು
ಭಗವಾನ್ ಮಹಾವೀರನ ಮುಕ್ತಿಯ ಸುದಿನವು
ಭರತಖಂಡ ವಿಶಿಷ್ಟ ಹಟ್ಟಿಹಬ್ಬದ ವೈಭವವು
ಬಣ್ಣಬಣ್ಣದ ಬೆಳಕಿನಹಬ್ಬ ದೀಪಾವಳಿಯು/೪/
ತರತರಹದ ತಿಂಡಿ-ತಿನಿಸಿನ ಸವಿರುಚಿಯು
ನೀರೂರಿಸುವಂತಹ ಮ್ರೃಷ್ಟಾನ್ನಭೋಜನವು
ಬಗೆಬಗೆಯ ಫ್ಯಾಷನ್ ವೇಷಭೂಷಣಗಳು
ಹಾಡಿಕುಣಿದು ಕುಪ್ಪಳಿಸುವ ದ್ರೃಶ್ಯಾವಳಿಯು/೫
ಆಣಿಪೀಣಿ ಕೋಲಾಟಗಳ ಸಡಗರವು
ಸಾಂಸ್ಕೃತಿಕದಾಂಡಿಯಾನ್ರೃತ್ಯ ಪಗಡೆಯಾಟವು
ಏಳುಬೀಳಿನ ಬಾಳಪಯಣದ ಸಂಕೇತವು
ರಾಷ್ಟ್ರೀಯ ಹಬ್ಬಗಳರಾಜ ದೀಪಾವಳಿಯು/೬/
—————————————————————————————————————
ಪ್ರೊ. ಶಕುಂತಲಾ.ಚನ್ನಪ್ಪ. ಸಿಂಧೂರ.




