ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

Even a businessman wearing a mask face to face

ಕೆಲ ದಿನಗಳಿಂದ ಸ್ನೇಹಿತರೊಬ್ಬರೊಂದಿಗೆ ಮಾತಾಡಿರಲಿಲ್ಲ , ವಾಟ್ಸ್ ಆಪ್ ನಲ್ಲಿ ಚಾಟ್ ಕೂಡ ಮಾಡಿರಲಿಲ್ಲ , ಹಬ್ಬಗಳಿಗೆ ವಿಶ್ ಕೂಡ ಎಕ್ಸ್ಚೇಂಜ್ ಆಗಿರಲಿಲ್ಲ.ಇಂದು ಅವರೊಂದಿಗೆ ಮಾತಾಡಿಯೇ ಬಿಡ್ಬೇಕು ಅಂತ ಅನಿಸಿತು.

ಹಾಗೆ ನೋಡಿದರೆ ನನಗೆ ಸ್ನೇಹಿತರು ಸ್ವಲ್ಪ ಕಡಿಮೆಯೇ , ಹೀಗಾಗಿ ಇದ್ದ ಸ್ನೇಹಿತರ ಬಗ್ಗೆಯೇ  ತುಸು ಹೆಚ್ಚು ಕನ್ಸರ್ನ್ ಅನ್ಬಹುದು .  ನಿರಂತರವಾಗಿ ಅವರ ಸಂಪರ್ಕದಲ್ಲಿ ಇರಲು ಬಯಸುತ್ತೇನೆ ,ಅದಕ್ಕಾಗಿ ನನ್ನ ಕೆಲಸ ಬದಿಗಿಟ್ಟು ಸಮಯ ಕೂಡ ತೆಗೆಯುತ್ತೇನೆ.ಅವರು ಮೆಸೇಜ್ , ಕಾಲ್ ಮಾಡ್ಲಿಲ್ಲ ಅಂದ್ರೆ  ನಾನೇ ಮಾಡಿಬಿಡುತ್ತೇನೆ ಸ್ವಲ್ಪ ಔಟ್ ಡೇಟೆಡ್ ಅನಿಸಿದರೂ , ‘ಜಗದೊಂದಿಗೆ ಓಡದ ಜನ’ ಅಂತ ಅನಿಸಿದರೂ ನಾವಿರುವುದು ಹೀಗೆಯೇ .

ಕಾಲ್ ಮಾಡಿ ಮಾತಾಡಲು ಆರಂಭಿಸಿದೆ . ಅವರದು ಐಟಿ ಪ್ರೊಫೆಶನ್ , ದೊಡ್ಡ ನಗರದಲ್ಲಿ ವಾಸವಿರುವುದು  ಹೀಗಾಗಿ ಅಲ್ಲಿನ ಜನರು ಎಷ್ಟು ಬ್ಯುಸಿ ಇರ್ತಾರೆ , ಅಲ್ಲಿ ಸಂಬಂಧಗಳು  ಅದೆಷ್ಟು ಪೊಳ್ಳು ಇರ್ತಾವೆ  ಅಂತ ಹೇಳಿದ್ರು . ಬರೀ ಕೆಲಸದ ನಿಮಿತ್ಯ ಮಾತಾಡುತ್ತಾರಂತೆ,ಅವರೇ ಹೇಳಿದ ಹಾಗೆ ಅವರ ಕೆಲ ಸ್ನೇಹಿತರೊಂದಿಗೆ ಅವರು ಎರಡೆರಡು ವರ್ಷಗಳು ಕಳೆದರೂ ಮಾತಾಡಿಲ್ಲವಂತೆ .ಎಷ್ಟೋ ಸ್ನೇಹಿತರ ನೆನಪು ಸಹ ಬರಲ್ವಂತೆ .ಇಲ್ಲಿ ಲೈಫ್ ಹೀಗೆ ಇರುತ್ತದೆ , ಯಾರಿಗಾಗಿ ಯಾರ ಹತ್ತಿರವೂ ಸಮಯವಿರುವುದಿಲ್ಲ ಬಟ್ ಅಗತ್ಯವಿದ್ದಾಗ ಮಾತಾಡಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆಂದು ಹೇಳಿದರು .ಇದನ್ನು ಅವರು ತುಂಬಾ ಸ್ಪಷ್ಟವಾಗಿ  ಎಳೆ ಎಳೆಯಾಗಿ ತೆರೆದಿಡುತ್ತಾ ಹೋದರು , ನಾ ಕೇಳುತ್ತ ಹೋದೆ.ಮನೆ ಮಕ್ಕಳ ಬಗ್ಗೆ ವಿಚಾರಿಸಿ ಮಾತು ಮುಗಿಸಿದೆ ಬಟ್ ,,,,

ಈ ಸಂಭಾಷಣೆಯು ನನಗೆ ಸ್ವಲ್ಪ ತಲೆ ಕೆಡಿಸಿಕೊಳ್ಳುವಂತೆ ಮಾಡಿತು. ಜನರು ಅಲ್ಲಿ ಅಷ್ಟೊಂದು ಪ್ರಾಕ್ಟಿಕಲ್ ಹೇಗಿದ್ದಾರೆ ? ಲೈಫ್ ನಲ್ಲಿ  ಅಷ್ಟು ಪ್ರಾಕ್ಟಿಕಲ್ ಇರುವ ನೆಸೆಸಿಟಿ ಇದೆಯಾ ? ಎಷ್ಟೊಂದು ಮೆಕ್ಯಾನಿಕಲ್ ಲೈಫ್ ಲೀಡ್ ಮಾಡ್ತಾರೆ  ಅಂತ ಅನಿಸಿದ್ದೂ ಎಷ್ಟು ನಿಜವೋ ಅಷ್ಟೇಯೇ ನಾ  ಭಾವನಾ  ಜೀವಿಯಾಗಿ  ಹಿಂದೆ ಉಳಿದುಬಿಟ್ಟೆನೇನೋ ಅಂತೆಂದುಕೊಂಡದ್ದೂ ಕೂಡ ಅಷ್ಟೇ ನಿಜ .

ಇಸ್ ಲೈಫ್ ಅ ರೇಸ್? /ಜೀವನ ಒಂದು ಓಟವೇ ? ಹಾಗಿದ್ದರೇ ಭಾವನೆಗಳಿಗೆ ಈ ಜಗದಲ್ಲಿ  ಜಾಗವಿಲ್ಲವೇ ?, ಉತ್ತಮ ಸಂಬಂಧಗಳು  , ಸ್ನೇಹಿತರು ಟೈಮ್ ಸಿಕ್ಕಾಗ ಅಥವಾ ಅವಶ್ಯಕತೆ ಇದ್ದಾಗ ಅಷ್ಟೇ ನೆನಪಾಗಬೇಕೇ ? ಹಣ ಗಳಿಸುವ ಭರದಲ್ಲಿ ಎಲ್ಲರನ್ನೂ ,ಎಲ್ಲವನ್ನೂ  ಹಿಂದಿಕ್ಕಿ ನಡೆಯುತಿದ್ದಾನೆ ಮನುಷ್ಯ, ಬಹುಶ  ಬ್ರಾಂಡೆಡ್ ಬದುಕಿನ ಬಯಕೆಯಲ್ಲಿ ಬದುಕಿಗಾಗಿ ಬದುಕುವುದು ಮರೆಯುತಿದ್ದಾನೆ ಮನುಷ್ಯ ಅಂತೆನಿಸಿತು …

About The Author

1 thought on ““ಹಾಗೆ ಸುಮ್ನೆ,,,,” ಹೀಗೊಂದು ಲಹರಿ,ವಾಣಿ ಯಡಹಳ್ಳಿ ಮಠ ಅವರಿಂದ”

Leave a Reply

You cannot copy content of this page

Scroll to Top