ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಲಿವ ನುಲಿವ ನಲ್ಮಮೆಯ ನಮ್ನಾಡು
ನಲುಗದಿರಲಿ ನಡೆ ನುಡಿಯ ಜಾಡು
ನಮ್ಮವರೇ ಎಸಗಿದ ಬೇಧದ  ಜಾಲು!!೧!!

ಮತ ಜಾತಿ ಪಂಥ ಧರ್ಮ-ಭೇದ
ಶೈವ ವೀರಶೈವ ಲಿಂಗಾಯತರ‌ ಖೇದ
ಇನಿತು ಅಲುಗದಿಹ ನಿಲುವು -ಕ್ರೋಧ!!೨!!

ಸಹಿಸದಾದರೂ ಒಬ್ಬರು ಇನ್ನೊಬ್ಬರ
ಅಸಹನೀಯ ಬದುಕ ಆಚಾರ  ವಿಚಾರ
ಒಂದೇ ಧರ್ಮದ ನಿಲುವಲಿ ಹುಟ್ಟಿಹರ!!೩!!

ಸರ್ವರಿಗೂ “ಬಸವನೇ ಪರಮ ಗುರು “
ಬಸವಣ್ಣನೇ ಮೂಲ ತಳಹದಿಯು
ಅರಿತು ಅರಿಯದಂತೆ ಹಲಗುವರಿವರು!!೪!!

ದ್ವೈತ ಅದ್ವಿತ ಶೈವ ಶ್ರೇಷ್ಠ ವಿದ್ವಾಂಸರು
ವಿಶಿಷ್ಟ-ವೀರಶೈವರು- ಲಿಂಗಾಯುತರು
ಒಂದೇ ಧರ್ಮದ -ದೇವನ ಮಕ್ಕಳು!!೫!!

ಇವರ ಒಳ ಒಳ ಪಂದ್ಯದ ಓಟ-ಕೂಟ
ನೋಡಿ ಕಳವಳಗೊಳ್ಳುತ್ತಿಹಳು ತಾಯಿ
ನಮ್ಮ ನಾಡ ಮಾತೆ ಸರ್ವ ಸಂಭುತೆ!!೬!!

ಅವರವರ ಗಾಢ ಜ್ಞಾನ  ಪ್ರಕಾಶವೇ
ಸರ್ವರಿಗೂ ಮಿಗಿಲೆಂದು, ನಾನು ಮೇಲೆ
ನೀನು ಮೇಲೆಂದು ಎದೆಯ ಒಡ್ಡಿ ನಿಂದಿಹರು!!೭!!

ನೋಡುತಿರೆ ನಾಡಾಂಬೆ ನಲಗುತಿಹಳು
ಕನಿಕರಪಡುತಿಹಳು ನೊಂದು ಬೆಂದಿಹಳು
ಲಿಂಗವನ್ನು ಎನಿತು‌ ಭೇಧವೆಣಿಸುವರಿವರೆಂದು!!೮!!

ವ್ಯತ್ಯಸ್ತತೆಯ  ಕಲ್ಲಿನೆದೆಯ   ಸೀಳಿ
ಪಂಥಗಳ ಮಧ್ಯ ನಲುಗದಿರಲಿ ನಾಡು
ಬಸವ ತೆತ್ತ ಬಲಿದಾನ ಮರೆಯಾಗದಿರಲಿ!!೯!!
 
ಬಸವ ಕಟ್ಟಿದ ಒಮ್ಮನದ ಮಾನವಿಯತೆ ಬೀಡು
ಮೂಡಿ ನೈಜ ಗೌರವ ಪದ ಪ್ರಜ್ಞೆ ಬೆಳಗಲಿ…..

About The Author

5 thoughts on “ಸವಿತಾ ದೇಶಮುಖ ಅವರ ಕವಿತೆ,”ನಲುಗದಿರಲಿ ನಾಡು””

    1. “ನಲುಗದಿರಲಿ ನಾಡು”ಬಸವ ಕಟ್ಟಿದ ನಾಡು ನಮ್ಮದು ನೈಜತೆ ಯಿಂದ ಮೂಡಿಬಂದಿದೆ.

Leave a Reply

You cannot copy content of this page

Scroll to Top