ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
“ನಮ್ಮೊಳಗೊಂದು ಹಣತೆ ಹಚ್ಚೋಣ.”


ನೆಮ್ಮದಿ ಕಳೆದುಕೊಂಡ ಬದುಕೊಳಗೆ
ಭರವಸೆಯ ಹಣತೆ ಹಚ್ಚೋಣ
ಕೊರಗಿ ಬಾಡುವ ಮನದೊಳಗೆ
ಸಂತೋಷದ ಹಣತೆ ಹಚ್ಚೋಣ
ಕಷ್ಟಗಳ ಸುಳಿಯೊಳಗೆ ಸಿಲುಕಿದವರ
ಮಡಿಲಿಗಾಸರೆಯಾಗೋಣ ನಾವು
ತುತ್ತು ಅನ್ನಕೋಸ್ಕರ ಪರದಾಡಿದವರ
ಉದರ ತುಂಬೋಣ ದಿನವು
ಮಾನವೀಯ ಗುಣದಿಂದ ಬವಣೆ ದೂರ
ದಾನವೀಯ ಧರ್ಮದಿಂದ ಬದುಕು ಹತ್ತಿರ
ಧರ್ಮ ಧರ್ಮಗಳ ನಡುವೆ ಬೆಸೆದ ಬಂಧ
ಅದು ಸಾಮರಸ್ಯ ತುಂಬಿದ ಅನುಬಂಧ
ಎಲ್ಲರೊಂದಿಗೆ ಬೆರೆತು ಸಾಗೋಣ
ಬೇಧ ಭಾವ ಮರೆತು ಬಾಳೋಣ
ಸುಂದರವಾದ ಸಮಾಜ ಕಟ್ಟೋಣ
ನಮ್ಮೊಳಗೊಂದು ಹಣತೆ ಹಚ್ಚೋಣ
——————
ಸತೀಶ್ ಬಿಳಿಯೂರು




Nice