ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಸವಿ ಜೇನಾಗುವ”

ನಮ್ಮೊಲವ ದಿಬ್ಬಣಕೆ ಈ ದೀಪ್ತಿಯೇ ಸಾಕ್ಷಿ
ಪ್ರೀತಿ ಬಾನಲಿ ಸ್ವಚ್ಛಂದದಿ ಹಾರಿದೆ ಪ್ರೇಮ ಪಕ್ಷಿ
ಎನ್ನ ಕನಸುಗಳ ಕಾವಲುಗಾರ ನೀನೆ
ನಿನ್ನ ಪ್ರತಿ ಕನಸಿನ ಒಡತಿಯೂ ನಾನೇ
ಎನಗೆ ನೀನು ನಿನಗೆ ನಾನು ಎಂದು ಹಾಡುತ
ಸಾಗೋಣ ಬಾಳ ದಾರಿಗೆ ಒಲವ ಗಂಧವ ಚಲ್ಲುತ
ಎನ್ನೆದೆಯ ತುಂಬ ನಿನ್ನ ನಗುವಿನ ತನನ
ಜೊತೆ ಇರಲು ನೀನು ತನುವಲೇನೋ ಕಂಪನ
ಬಾಳ ಜ್ಯೋತಿಗೆ ಒಲವ ತೈಲವೆರೆಯೋಣ
ಪ್ರೀತಿ ಬೆಳಕಲಿ ನಿತ್ಯ ಸವಿಜೇನಾಗೋಣ
——————————————

ಮಧುಮಾಲತಿರುದ್ರೇಶ್




ತುಂಬು ಧನ್ಯವಾದಗಳು ತಮಗೆ