ಕಾವ್ಯ ಸಂಗಾತಿ
ಪರಮೇಶ್ವರಪ್ಪ ಕುದರಿ
ಶಾಯರಿಗಳು

ಇತ್ತಿತ್ತಲಾಗ ನೀ ಬಾಳ ಬದ್ಲಾಗೀದಿ ಅಂತ
ಬಾಳ ಮಂದಿ ಕೇಳಾಕತ್ತಾರ ನನ್ನ!
ಉದುರಿ ಹೋದ ಒಣ ಎಲಿ ನಾನು ಬಣ್ಣಾನು ಬದ್ಲಾಗ ಬಾರ್ದು ಅಂದ್ರ ಹೆಂಗ!!
*****
ಪ್ರೇಮದ ಕನಸು ಬೀಳಾಕ ಶುರುವಾತಂದ್ರ ಜೀವನ ಬರಬಾದ್ ಆತು ಅಂತನ
ಅರ್ಥ!
ಪ್ರೀತಿಸಿದವ್ರು ಸಿಗ್ರಾರೋ ಇಲ್ಲ ಗೊತ್ತಿಲ್ಲ ಆದ್ರ ನಕ್ಷತ್ರ ಎಣಸೂದಂತೂ ತಪ್ಪೂದ ಇಲ್ಲ!!
*****
ಬಾಳ ಮಂದಿ ಹೇಳ್ತಾರ ನನಗ ನೀವು ಬಾಳ ಚಂದ ಶಾಯಿರಿ ಬರೀತೀರಿ ಅಂತ!
ನಾನಂದೆ , ಬಾಳ ಚಂದ ನಾನಿಲ್ಲ ನನ್ನಿಂದ ಬರಸಗೊಳಾಕಿ ಬಾಳ ಚಂದ ಅದಾಳ ಅಂತ!!
*****
ನಗುವವರ ಹೃದಯದಾಗ ನೋವೂ ಇರತೈತಿ
ನಗುವ ಕಣ್ಣಿನೊಳಗ ದುಃಖಾನೂ ಇರತೈತಿ!
ನಿನ್ನ ನಗಿ ಮಾತ್ರ ಯಾವತ್ತೂ ಮಾಸದಂಗಿರಲಿ
ಯಾಕಂದ್ರ ಅದು ನನಗ ಬಾಳ ಹುಚ್ಚ ಹಿಡಸೈತಿ!!
————————————————————————————————————-

ಪರ.ಮೇಶ್ವರಪ್ಪ ಕುದರಿ




ಮನ ಮುಟ್ಟುವ ಸಾಲುಗಳು
ಧನ್ಯವಾದಗಳು