ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಲವಿನೂರಿನ
ಹುಡುಗನಿಗೆ,
ನವಿಲೂರ
ಹುಡುಗಿಯು
ಕಾಡುತ್ತಲೇ ಇದ್ದಳು..
ಮರೆಯದಂತೆ ಕಾಣುತ್ತಲಿದ್ದಳು..
ಕಾರ್ಮೋಡ ಸಮಯದ
ಕೋಲ್ಮಿಂಚಿನ ಬೆಳಕಂತೆ
ಮೇಘಸರಿದ ನೇಸರನಂತೆ
ಮತ್ತೆ ಮತ್ತೆ ಅವಳದೇ ನೆನಪು
ಕಣ್ಮಚ್ಚಿದರೂ ಕಂಗಳ ಹೊನಪು….

ನವಿಲೂರ ಬೆಡಗಿಯ
ನೆನಪಿನಂಗಳದಲಿ ,
ಒಲವಿನ ಹುಡುಗನ
ತಕದಿಮಿತ,
ರೂಪ ಅನುರೂಪ
ಬಿಸಿಯುಸಿರು,
ಗಟ್ಟಿ ಹೆಸರು
ಕೂಗಿ ಬಿಡಲೇ,ಒಮ್ಮೆಲೇ
ಜೋರಾಗಿ, ರಾಗವಾಗಿ
ಹಿತವಾಗಿ, ಮಿಳಿತವಾಗಿ
ಎಂಬ ಭಾವ ,
ಹೇಳಿಕೊಳ್ಳಲಾಗದ ನಿರ್ಭಾವ.

ಇಬ್ಬರ ಪ್ರೇಮವೂ
ದಿಗಂತವಲ್ಲದ ನಿರ್ದಿಂಗತ,
ಕೂಡಲು ಸುಮೂರ್ಹತಕ್ಕೆ
ಸಿಗಲಿಲ್ಲ ಸಮಯ
ಕೂಡಲು ಸದಾ ಆಸೆ
ಮಧ್ಯದ ಅಮುಕ್ತ ಸೇತುವೆ
ಅಮರ ಮಧುರ
ಸುಮಧುರ ಪ್ರೇಮಸ್ಮಿತವು
ತೇಲಿದೆ ಗಾಳಿಯಲಿ
ಮುತ್ತುಗಳ ಸುರೆಮಳೆಯಲಿ
ಜಡಿಹನಿಯಲಿ ಹಸಿರಿಳೆಯಲಿ
ತಂಪುಗರಿಕೆಯಲಿ
ಹಸಿರ್ ಹೊಂದಿಕೆಯಲಿ..

ಪ್ರೇಮಕ್ಕೊಂದು ಭಾಷೆ
ಪ್ರೀತಿಗೊಂದು ಪರಿಷೆ
ಸೇರುವ ಒಲವು
ಸೇರಲಿಲ್ಲದೇ
ಒಳಗೊಳಗೆ ಸೆರೆಯಾಗಿತ್ತು
ತಿರಸ್ಕಾರ ಹೃದಯಸ್ವರವಾಗಿತ್ತು
ಹೊರನೋಟ
ಒಳನೋಟವಾದಾಗ
ಪ್ರೇಮವೇ‌ ಪಥವಾಗಿತ್ತು
ಸೇರದ ಬೇಸರ
ನೆನಪಿಗೆ ಆಸರೆಯಾಗಿತ್ತು
ಇರ್ವರ ಒಲವು ಕಲ್ಪನೆಯ
ಕೈಸೆರೆಯಾಗಿತ್ತು
ಹೃದಯಗಳ ವಿಷಯವಾಗಿ
ಸಂಬಂಧಗಳ ಅನುಬಂಧ
ಪಸರಿಸಿ ಹೂವು ಹಣ್ಣಾಗಿತ್ತು


ತಾತಪ್ಪ.ಕೆ.ಉತ್ತಂಗಿ


About The Author

21 thoughts on “ತಾತಪ್ಪ.ಕೆ.ಉತ್ತಂಗಿ ಕವಿತೆ “ಒಲವಿನೂರೊಳಗೆ””

  1. ಕವನ ಚನ್ನಾಗಿ ಮೂಡಿ ಬಂದಿದೆ
    ಹೀಗೆ ಮುಂದುವರಿಯಲಿ ಕವನ ಸರಣಿ

    1. ಗುರುಗಳೇ
      ತುಂಬಾ ಚೆನ್ನಾಗಿ ಇದೆ
      ಓದುತ್ತಲೇ ಕುತಹಲ ಮೂಡಿಸುವಂತಿದೆ…❤️

  2. ರವಿ ಕಾಣದನ್ನ ಕವಿ ಕಂಡ❤️ ನೆಚ್ಚಿನ ಗುರುಗಳಿಂದ ಮೂಡಿಬಂದ ಕವನ ಶುಭವಾಗಲಿ ಸರ್ ~Vedanth

  3. ಅದ್ಭುತವಾದ ಕವಿತೆ ಸರ್♥️ ನನ್ನ ನೆಚ್ಚಿನ ಗುರುಗಳು

  4. ತುಂಬಾ ಚೆನ್ನಾಗಿದೆ ಸರ್. ಹೀಗೆ ನಿಮ್ಮ ಕವಿತೆಗಳು ಬರುತಿರಲಿ… ಓದಲು ನಾವು ಕಾತುರದಿಂದ ಕಾಯುತ್ತೇವೆ..

  5. ❤️ನಮ್ಮ ಗುರುಗಳು ಕನ್ನಡದ ಕಂದ ಅವರ ಕವಿತೆಗಳು ಹೀಗೆ ಮೂಡಿ ಬರುತ್ತಿರಲಿ ಚೆಂದ✨️

  6. ಕನ್ನಡ ಅದ್ಧ್ಯತ್ಮಿಕ ಗುರುಗಳು ನಮ್ಮ ಕನ್ನಡದ ಕಂದ ಇನ್ನಷ್ಟು ಬರಿಯಲಿ ಚಂದ

Leave a Reply

You cannot copy content of this page

Scroll to Top