ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
“ನಿಲ್ಲು ನಿಲ್ಲು ಮೋಡವೆ”

ಎಲೆ ಮೋಡವೇ ನಿಲ್ಲು! ನಿಲ್ಲು !
ಅದೆಷ್ಟು ?ಜಾಗ್ರತೆ ನಿನಗೆ
ಕರುಣೆ ಬೇರೆ
ರೈತನ ಮೇಲೆ
ಸುರಿವ ಮಳೆ ಸುರಿಸಿ ಬಿಡುವೆ
ಬಿಡು ಬಿಡು ಸಾಕು ಕೋಪ
ರೈತ ಕಂಗಾಲು
ಬೆಳೆ ಮಣ್ಣುಪಾಲು
ಆದರೇನು? ಮಾಡುವುದು?
ಕಾಲಕ್ಕೆ ತಕ್ಕಂತೆ ಬೆಳೆಬಾರದು
ಅತೀ ಆಸೆ ದುರಾಸೆ ಕೇಡು
ತಿಳಿಯದು ಮನಕ್ಕೆ
ಶೀಘ್ರ ಬರಬೇಕು ಬೆಳೆ
ನಾಲ್ಕು ದಿನಕ್ಕೋ !
ಒಂದು ವಾರಕ್ಕೋ !
ನಿನಗೆ ತಿಳಿಯದು ಬಿಡು
ಪಾಪ ನೀನೇನು! ಮಾಡುವೆ
ನಿನ್ನ ಕರ್ತವ್ಯ ನಿನಗೆ
ಸುರಿಸಿ ಬಿಡು ಹೋಗಲಿ
ಕಂಗೆಟ್ಟ ರೈತನ ಕಂಗಳು
ಇಂದು ಸಂತಸ ಕಂಡಿವೆ
ಆಗೊಮ್ಮೆ ಈಗೊಮ್ಮೆ
ಸುರಿಯುವ ನಿನ್ನ ಮಳೆಗೆ
ಬೆಳೆಗಳೆಲ್ಲ ಖುಷಿಯಾಗಿ
ಮಿಂದೆದ್ದು ಏಳುತ್ತಿವೆ
ಹೇಳಲೂ ಬಾರದು ಬಿಡು
ನೀನೇ ನೋಡುತ್ತಿರುವೆ ಅಲಾ
————————————————————————————–

ಡಾ ಸಾವಿತ್ರಿ ಕಮಲಾಪೂರ



