ಕಾವ್ಯ ಸಂಗಾತಿ
ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ
“ಮತ್ತೆ ಎದ್ದಿದೆ”

ಮತ್ತೆ ಎದ್ದಿದೆ
ಕಪ್ಪು ನೆಲದಲಿ
ಹೊಸ ಕೂಗು
ಹೊಸ ಬದುಕಿಗೆ
ಹೊಸ ಕನಸಿಗೆ
ಬುದ್ಧ ನಡೆ
ಬಸವ ಪಡೆ
ಭೀಮ ಸೇನೆ
ಮುನ್ನುಗ್ಗುತಿವೆ
ಕ್ರಾಂತಿ ಕಹಳೆ
ಮೊಳಗಿದೆ
ಸತ್ಯ ಸಮತೆ
ಶಾಂತಿ ಪ್ರೀತಿ
ಭರವಸೆ ನಾಡಿಗೆ
ಸರ್ವರಿಗೆ ಸಮಪಾಲು
ಸರ್ವರಿಗೆ ಸಮಬಾಳು
ಆಗದಿರಲಿ ಘೋಷಣೆ
ಹಸಿವು ಬಡತನ
ಮೋಸ ವಂಚನೆ
ಕೊನೆಗೊಳ್ಳಲಿ ಶೋಷಣೆ
ಗುಡುಗುತಿವೆ ಗುಡಿಸಲು
ನಡುಕು ಹುಟ್ಟಿದೆ
ಸಂಸತ್ತಿನಲ್ಲಿ
ತಲೆ ಬಾಗಿ ನಮಿಸಬೇಕು
ಸಂವಿಧಾನ ಮೌಲ್ಯಕೆ
ವಚನ ಶಾಸ್ತ್ರ ಸಾರಕೆ
ತೊಲಗಬೇಕು
ಜಾತಿ ಮತ ವರ್ಣ ವರ್ಗ
ಮನುಜ ಮತ ವಿಶ್ವ ಪಥ
ಸಮ ಸಮಾಜದ ಪಥ
ಬುದ್ಧ ಬಸವರ ರಥ

ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಕ್ರಾಂತಿ ಕಹಳೆ ಕವಿತೆ
ಅದ್ಭುತ ಕವನ ಸಂಕಲನ ಕೃತಿ
Nice expression Sir