ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
“ಕಡಲ ಕರೆ”.


ಕೈ ಬೀಸಿ ಕರೆಯುತಿದೆ ಸಾಗರವು ದಿನ ನಿತ್ಯ
ಓ ಗೆಳೆಯ ನೀ ಬಾರೋ ನನ್ನ ಬಳಿಗೆ
ಬಾ ಬಾರೋ ಗೆಳೆಯಾ ನನ್ನ ಬಳಿಗೆ||
ನೋವು ನಲಿವುಗಳೆಲ್ಲ ನನ್ನಲೆಯ ತರದಂತೆ
ಬಿಟ್ಟು ಬಿಡು ಜೀವನದ ಎಲ್ಲ ಚಿಂತೆ~~
ಬೇಡ ಬಿಡು ನಿನಗೇ ಯಾವುದೇ ಚಿಂತೆ ||
ಹಾಯಾಗಿ ಕುಳಿತು ಬಿಡು ನನ್ನ ಉಸಿರಿನ ಜೊತೆಗೆ
ಮೊರೆವ ಓಂಕಾರದಲಿ ಮೌನವಾಗಿ
~ ಓಂಕಾರ ಧ್ವನಿಯಲ್ಲಿ ಮೌನವಾಗಿ ||
ಹುಟ್ಟು ಸಾವುಗಳ ಕೋಟಿ ಕೋಟಿಯ ಜೀವ
ನಶ್ವರದ ಲೋಕ ಮರೆತು ಸ್ಥಿರವಾಗಿ
~ ಅಸ್ತಿತ್ವವನೆ ಮರೆತು ಮತ್ತೆ ಸ್ಥಿರವಾಗಿ||
ಹೊರಳಾಡು ಮಗುವಂತೆ ಮರಳುರಾಶಿಯಲಿಂದು
ಮರಳಿ ಬಾರದ ಬಾಲ್ಯ ತಿರುಗಿ ಬರಲೆಂದು
ಕಳೆದ ಬಾಲ್ಯವು ಮತ್ತೆ ಮರಳಿ ಬರಲೆಂದು ||
ಸ್ವಚ್ಛಂದ ಆಕಾಶ ರವಿಯ ಕೇಸರಿ ಕಿರಣ
ಹೊಳೆವ ತೆರೆಗಳ ನಡುವೆ ಹಾಯಾದ ಗಾಳಿ
ಪಂಚಭೂತದ ಜೊತೆಗೆ ನಡೆಯುವಾ ಹೋಳಿ ||
ಎಸ್ ವಿ ಹೆಗಡೆ




ನೀವೂ wordsworth, ಜೋನ್ keats, p b shelly, ಈ ಎಮ್ ಫಾಸ್ಟರ್ ಬ್ರಾಹ್ಮೀ, ಹಳೆ ಕನ್ನಡ, ಎಲ್ಲಾ ಬಾಷೆಗಳ, ಆಂಗ್ರಿಜಿ, ಸಂಸ್ಕೃತ 9 ಬಾಷೆಗಳ ಸಂಯೋಜನೆ ಪಾಲಿ ಪಟ್ಟ ಬುಡಕತ್ತುಗಳ ಬಾಷೆ ಸಂಯೋಜಿಸಿ ಕನ್ನಡ ಹಿಂದೆ ಬ್ರಿಟಿಷ್ ಇಂಡಿಯಾ ಸರ್ಕಾರ ಶಾನುಭೋಗ ರ, ಸರ್ವೇ settlment ಸ್ಕೆಚ್, ನಕ್ಷೆ ಗ್ರಾಮಗಳಿಗೆ ಅಜಾಮಾಶು ಡಿಮ್ಯಾಂರ್ಕ ಗ್ರಾಮ ಗಳ ನಕ್ಷೆ ಬಾಷೆ ಪಾರ್ಸಿಯನ್ ಬಾಷೆ ಸೇರಿಕ್ಕೊಂಡು ಧಖಲು ಪತ್ರ… Ok ಕನ್ನಡ, ಸಂಸ್ಕೃತ ಎರಡೇ ಎರಡು ಬಾಶೆಗಲ್ಪೀ ಪೈ ಪೋಟಿ ಆಗಾಗ್ಗೆ ಅಪ್ಡೇಟ್ಸ್ ಮಾಡಿಕೊಳ್ಳುತ್ತಲೆ ಇದೇ ಕನ್ನಡ.
ಆದರೆ ರಾಜಕೀಯ ವಿಪ್ಲಾವ ಶೀಘ್ರದಲ್ಲಿ anti incubency ಮೋದಿ ಸರ್ಕಾರ ಬಡವರನ್ನು ತಯ್ಯರು ಮಾಡಿತು ನಿಮ್ಮ ನೋಬಲ್ ಕವನ ಓದುವ ಜನರು ದೇಶದಲ್ಲಿ ಇದ್ದರು ಈಗ ಈ ಕ್ಷಣ ಎಷ್ಟೋ ಜನ ಕುಟುಂಬ ಆತ್ಮ ಹತ್ಯೆ,.. ಏನೇನೊ ಅಲ್ಲೋಲ ಕಲ್ಲೋಲ ರೋಜದಿನ ಒತ್ತಾದ ಜಾoಜಾಟಾ…. ನೆಪೋತಿಸ್ಟ್ಸ್ cont
ನಿಮ್ಮ ಅಭಿಪ್ರಾಯಕ್ಕೆ ಧನ್ಯ ವಾದಗಳು.
ಒಟ್ಟಾರೆ ಬರಹಗಾರನ ಭಾವನೆ
ಓದುಗರ ಚಿಂತನೆಗೆ ಮುಟ್ಟಿ ಒಳ್ಳೆಯ ಸಂವೇದನೆ ಅನುಭವ ಆದರೆ ಸಾಕು.