ಗಜಲ್ ಸಂಗಾತಿ
ಎಮ್ಮಾರ್ಕೆ ಅವರ ಗಜಲ್


ಅಂದುಕೊಂಡ ಹಾಗೇ ಇಲ್ಲೇನು ನಡ್ಯುದುಲ್ಲ
ಆಸೆ ಪಟ್ಟ ಹಾಗೆಯೂ ಮತ್ತೇನು ನಡ್ಯುದುಲ್ಲ
ಇಲ್ಲೇನ ಆಗಬೇಕಂತೈತೋ ಅದೇ ಆಗೋದು
ಈಶನಾಸೆಯ ಬಿಟ್ಟಿಲ್ಲಿ ಬೇರೇನು ನಡ್ಯುದುಲ್ಲ
ಉಪಟಳವ ಉಂಡಷ್ಟು ಬಾಳು ಉಜ್ಜಳಾಗ್ತದ
ಊಹಿಸಿಕೊಂಡಂತಿಲ್ಲಿ ಏನೇನು ನಡ್ಯುದುಲ್ಲ
ಋಣವಿದ್ದರಷ್ಟೇ ದಕ್ಕುವುದು ಅದೇನೇ ಇರಲಿ
ಎ(ಗು)ಣಿಸಿರುವಂತಿಲ್ಲಿ ಹಾಗೇನು ನಡ್ಯುದುಲ್ಲ
ಏರಿದಷ್ಟು ವಿಷ ಹಾರುವುದಂತೆ ಪ್ರಾಣದ ಪಕ್ಷಿ
ಐಚ್ಛಿಕವು ಬ್ರಹ್ಮಗೆ ಅದ ಬಿಟ್ಟೇನು ನಡ್ಯುದುಲ್ಯ
ಒಗಟಿನಂತೆಲ್ಲರ ಬಾಳು ಸುಲಭವಲ್ಲ ಬಿಡಿಸಲು
ಓಜದಂತಿಹುದು ಓಟವು ಹೆಚ್ಚೇನು ನಡ್ಯುದುಲ್ಲ
ಔದಾರ್ಯದೌತಣವಿತ್ತು ಕುಂಬಾರ ಬದುಕಿಹನು
ಅಂ ಅಃ ಕೊನೆಯಂತೆ ಮುಂದೇನು ನಡ್ಯುದುಲ್ಲ
ಎಮ್ಮಾರ್ಕೆ



