ಕಾವ್ಯ ಸಂಗಾತಿ
ಎಮ್ಮಾರ್ಕೆ
“ಬೇಕಿತ್ತು”

ಮುಪ್ಪಿನ ಕಾಲಕ್ಕ
ಹಡದ ಮಕ್ಕಳು
ಅಪ್ಪ ಅವ್ವಗ
ಆಸರಾಗಬೇಕಿತ್ತು,
ಬಾಳ ಬ್ಯಾಸರಾದರು
ಕಡಕಿನ ಕಾಲಕ್ಕ
ಸೊಸೆಯಂದಿರು
ಅತ್ತಿ ಮಾವಂದಿರ
ಒಟ್ಟಿಗಿರಬೇಕಿತ್ತು,
ದೂರಿ ದೂರಾದರು
ಬದುಕಿದ್ದ ಕಾಲಕ್ಕ
ಬಂಧು ಬಳಗದವರು
ಕಡುಕಷ್ಟ ಬಂದಾಗ
ಹೆಗಲ ಕೊಡಬೇಕಿತ್ತು,
ಬೆನ್ನು ತೋರಿದರು
ಸಾಯೋ ಕಾಲಕ್ಕ
ನೆರಿಹೊರಿಯವರು
ಒಂದೆರಡು ಚಲೋ
ಮಾತಾಡಬೇಕಿತ್ತು,
ಮಾತಲ್ಲೇ ಚುಚ್ಚಿದರು
ಸತ್ತ್ಹೋದ ಕಾಲಕ್ಕ
ಸುತ್ತ ನಿತ್ತು ಅತ್ತು
ಪಶ್ಚಾತಾಪದಿಂದ
ಕಣ್ಣ ತೆರಿಬೇಕಿತ್ತು
ಮಣ್ಣು ಮಾಡಿದರು

ಎಮ್ಮಾರ್ಕೆ




ವಾಸ್ತವ ಚಿತ್ರಣ