ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸದ್ದಿಲ್ಲದೆ ಹರಿಯುವ ಚೇತನವಿದು ಜೀವದ್ರವ್ಯ /
ಪಾಪವ ಕಳೆಯುವ ಪಾವನವಿದು ಜೀವದ್ರವ್ಯ /

ಬೆಟ್ಟ ಗುಡ್ಡಗಳಲ್ಲಿ ಕಲ್ಲು ಸಂದಿಗಳಲ್ಲಿ ಜನನ /
ಸದಾ ಮೊರೆಯುವ ಕೀರ್ತನವಿದು ಜೀವದ್ರವ್ಯ /

ಬಳುಕುವ ಹೊನಲಿನಲಿ ಬಯಲೆಲ್ಲಾ ಹಚ್ಚ ಹಸಿರು /
ಕಾನನದ ತುಂಬ ನಗುವ ಸುಮನವಿದು ಜೀವದ್ರವ್ಯ /

ಖಗ ಮೃಗ  ಪಾಲನೆಗೆ ನಿಸರ್ಗವಾಗಿದೆ  ತೊಟ್ಟಿಲು /
ಪ್ರಕೃತಿ ಮಾತೆಗೆ ಉಸಿರಿನ ಭಾವನವಿದು ಜೀವದ್ರವ್ಯ /

ಹೊನ್ನೆ, ಮತ್ತಿ,ಬೀಟೆ, ಬಿದಿರು ಶ್ರೀಗಂಧದ ಕಾಡು /
ವನಸಿರಿ ಗರ್ಭಕೆ ಉತ್ಸಾಹದ ನರ್ತನವಿದು ಜೀವದ್ರವ್ಯ /

About The Author

1 thought on “ಸರ್ವಮಂಗಳ ಜಯರಾಂ ಗಜಲ್”

Leave a Reply

You cannot copy content of this page

Scroll to Top