ಕಾವ್ಯ ಸಂಗಾತಿ
ವೈ ಎಂ ಯಾಕೊಳ್ಳಿಅವರ
ಜುಲ್ ಕಾಫಿಯಾ ಗಜಲ್


ಬದುಕಿನ ಅಂದವನು ಹೆಚ್ಚಿಸಿತು ನಿನ್ನ ಪ್ರೀತಿ
ಜೀವನದ ಸುಗಂಧವನು ಮೆಚ್ಚಿಸಿತು ನಿನ್ನ ಪ್ರೀತಿ
ಏನೆಲ್ಲ ಇದ್ದರೂ ಸಂತಸವು ಇರದ ಬಾಳಾಗಿತ್ತು ಆಗ
ಬದುಕಿನಲಿ ಚಂದವನು ಸೂಚಿಸಿತು ನಿನ್ನ ಪ್ರೀತಿ
ಬರಡಾದ ನೆಲದಂತೆ ಏನೂ ಬಿತ್ತದೆ ಇದ್ದಿತು ಎದೆ
ಹಸಿರಾದ ಬಂಧವನು ಉಚ್ಛರಿಸಿತು ನಿನ್ನ ಪ್ರೀತಿ
ಮಳೆಯ ಸೂಚನೆ ಇರದ ಬರಿದಾದ ಬಾನಂತೆ ಇದ್ದೆ
ಕಾರ್ಮೋಡದ ಅನುಬಂಧವನು ಎಚ್ಚರಿಸಿತು ನಿನ್ನ ಪ್ರೀತಿ
ಬೇಸಿಗೆಯ ಬಿಸಿಲಿಗೆ ಮುರುಟಿ ಮರದಂತಿದ್ದ ಜೋಗಿ
ಕೊಂಬೆರೆಂಬೆಗೂ ಮಕರಂದವನು ಅಚ್ಚರಿಸಿತು ನಿನ್ನ ಪ್ರೀತಿ
ವೈ.ಎಂ.ಯಾಕೊಳ್ಳಿ




1 thought on “ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್”