ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
“ನಿನ್ನ ಬಿಟ್ಟಿರದೆ”


ಚಿತ್ತ ಭಿತ್ತಿ ಯಲಿ ನಿನ್ನದೇ ಹೆಸರು
ಸೇರಾಗಿದೆ ಅದರಲ್ಲಿ ನನ್ನ ಉಸಿರು
ಎಂದೆಂದಿಗೂ ಒಣಗದಾಗಿದೆ ಹಸಿರು
ಆದರೂ ಏಕೆ ನೀ ಮಾಡುತ್ತಿರುವೆ ಕೊಸರು
ನಿನ್ನ ಕಂಡಂದೆ ನಿನಗೆ ಮನಸು ಕೊಟ್ಟಾಗಿದೆ
ನಿನ್ನ ಬಿಟ್ಟಿರದೆ ನಾನೆಂದಿಗೂ ಇರಲಾಗದೆ
ಕನಸೆನಿಸುತಿದೆ ನನಗೆ ನಿನ್ನ ಸೇರಲಾಗದೆ
ಮನಸ್ಸಿನಲ್ಲೇ ಮಂಡಿಗೆ ತಿನ್ನುವಂತಾಗಿದೆ
ಯಾವುದೋ ಜನ್ಮದಲ್ಲಿನ ಗೆಳತಿಯಂತೆ
ನನಗಾಗೆ ನೀನು ಜನ್ಮ ತಳೆದಿರುವಂತೆ
ನಿನ್ನ ಸೇರದೆ ನಾನು ಒಂಟಿಯಾಗಿರುವಂತೆ
ಎಂದು ಬರುವೆ ನನ್ನ ಸೇರಲು ಜಂಟಿಯಾಗುವಂತೆ
ನನ್ನ ಮೇಲೆ ಕರುಣೆ ಇಡು ಇನ್ನಾದರು
ಈ ಬಡಪಾಯಿ ಮೇಲೆ ಕೊಂಚ ಪ್ರೀತಿ ತೋರು
ಸಾಕಾಗಿದೆ ಅಕ್ಕ ಪಕ್ಕದವರ ಕಿಡಿ ಕಾರು
ಸಂಸಾರಿ ಪಟ್ಟ ದೊರೆಯುವಂತೆ ಸಾರು
ಡಾ. ಲೀಲಾ ಗುರುರಾಜ್



