ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪ ಮಲಗಿದ್ದಾನೆ
ಮಲಗಲಿ ಬಿಡಿ ಪಾಪ
ದಣಿದ ದೇಹದ ಆಯಾಸ
ಕೊಂಚವಾದರೂ ನೀಗಲಿ

ದುಡಿದು ದುಡಿದು ಸುಸ್ತಾದರೂ
ತೋರ್ಪಡದೇ ದಿನ ದೂಡಿದ
ನಮ್ಮ ಆಸೆ ನೀಗಿಸಲು
ನಮ್ಮ ಬಾಳು ಬೆಳಗಲು

ನೋವ ನುಂಗಿ ನಗುತ್ತಿದ್ದರೂ
ಗದರಿಸುತ್ತಲೇ ಬೆಳಸಿದಾ
ತನ್ನ ಹಿಡಿತದಲೇ ಇಟ್ಟುಕೊಂಡ
ಅತ್ತ ಇತ್ತ ನುಗ್ಗದಂತೆ

ಹೆದರಿಕೆ ಇತ್ತು ತುಸು ಕೋಪವೂ
ಅಪ್ಪನ ಈ ರೀತಿಗೆ
ಬೈಯುತ್ತಲಿದ್ದೆವು ಅಮ್ಮನ ಮುಂದೆ
ಅಪ್ಪನ ಈ ನಡೆತೆಗೆ

ಯಾವದನೂ ಹಚ್ಚಿಕೊಳ್ಳಲಿಲ್ಲಾ
ತನ್ನ ಹಾದಿಯಲ್ಲಿ ತಾನಿದ್ದ
ಬಯಸಿದ್ದೆಲ್ಲಾ ನೀಡುತ್ತ
ತಾನು ಮಾತ್ರ ಹಾಗೇ ಇದ್ದ

ತನಗೆ ದೊರಕದು ನಮಗೆ ದೊರಕಲಿ
ಎಂದು ದೇವರಲಿ ಬೇಡುತ್ತಿದ್ದ
ಇದೊಂದೇ ಬೇಡಿಕೆ ಅಪ್ಪನದು
ಮಕ್ಕಳ ಏಳಿಗೆಗೆ ತ್ಯಾಗವದು

ಅರಿತೆವು ಈಗ ಆತ ಕಳೆದ ದಿನಚರಿ
ನಾವು ಹೂವಾಗಲು ಆತ ಮುಳ್ಳಾದ
ನಮಗಾಗಿ ಆತ ದುಡಿದ
ಮುಪ್ಪಾದ

ಈಗ ಯಾಕೋ ಶಾಂತವಾಗಿ ಮಲಗಿದ್ದಾನೆ
ಎಬ್ಬಿಸುವ ಮನಸಿಲ್ಲಾ
ಆತನ ದಣಿವು ದುಃಖ ನಾ ಹೊರುವೆ
ಆತನ ಮುಖದಲಿ ನಗುವ ತರುವೆ

ನನ್ನ ಮಾತಿಗೆ ಮನದ ಸಮ್ಮತಿ
ಇನ್ನಾದರು ವಿರಮಿಸಲಿ ನಮ್ಮ ಜೊತೆ
ಅಪ್ಪನ ಶ್ರಮದ ಫಲವೇ
ಇಂದಿನ ನಮ್ಮ ಜೀವನವು

ಎಬ್ಬಿಸೋಣ ಈಗ ಹೊತ್ತಾಯಿತಲ್ಲಾ
ಇಷ್ಟೋಂದು ತಡ ಆಗೆ ಇಲ್ಲಾ
ಮೈದಡವಿದೆ ಚಲನೆಯೇ ಇಲ್ಲಾ
ಬಿಟ್ಟು ಹೋಗಿದ್ದಾ ಎಲ್ಲಾ

ನಮಗಾಗಿ ದುಡಿದಾ ನಮಗಾಗಿ ಮಡಿದಾ
ನಮ್ಮನ್ನೋಂದೇ ನೋಡಿದಾ
ತನ್ನ ತನವನೇ ಮರೆತು ಬಾಳಿ
ನಮ್ಮನ್ನೇ ಬಿಟ್ಟು ಹೋದ


About The Author

2 thoughts on “ಅಪ್ಪಂದಿರ ದಿನದ ವಿಶೇಷ-ಪ್ರಮೋದ ಜೋಶಿ”

  1. ಮಕ್ಕಳಿಗಾಗಿ ಸದಾ ದುಡಿದು ಮಡಿವ ಅಪ್ಪನನ್ನ ಮತ್ತೆ ಮತ್ತೆ ನೆನಪಿಸುವಂತೆ ಮಾಡುವ ಸಾಲುಗಳು ಸರ್

  2. ಅಪ್ಪ ಮಿಲಿಟರಿಯಲ್ಲಿದ್ದರು ರಜೆಗೆಂದು ಬಂದಾಗ ಅವರ ಕಠಿಣ ನಿಯಮಗಳು ಖರ್ಚಿಗೆ ಕೊಟ್ಟ ರೊಕ್ಕಕ್ಕೆ ಇಡಬೇಕಾದ ಲೆಕ್ಕ, ಗೆಳೆಯರ ಬಳಗದ ಆಯ್ಕೆ, ತಲೆಗೂದಲ ಕಟಿಂಗ್ ವಿಚಾರ, ಹೇಗೆ ಬಟ್ಟೆ ಹೊಲಿಸಿಕೊಳ್ಳಬೇಕೆನ್ನುವ ಕುರಿತು ,…..ಹೀಗೆ ಎಲ್ಲದರಲ್ಲೂ ನಿಯಮ ನಿಯಮ ನಿಯಮ ಯಾಕಾದರೂ ಮಿಲಿಟರಿ ಇವರಿಗೆ ರಜೆ ಕೊಡುತ್ತೊ ಅಂದ್ಕೊಳ್ತಿದ್ದೆ ಆದರೆ ಈಗಿನ ಹುಡುಗರನ್ನು ನೋಡಿದಾಗ *ನನ್ನಪ್ಪನನ್ನ* ಹಾಗೆ ಬೆಳೆಸಿದ್ದೇ ಒಳ್ಳೆಯದು ಅನ್ನಿಸ್ತಿದೆ ಸರ್ ಅಪ್ಪನ ಕುರಿತಾಗಿ ನೀವು ಬರೆದ ಕವನ ತುಂಬ ಚನ್ನಾಗಿತ್ತು ಸರ್

Leave a Reply

You cannot copy content of this page

Scroll to Top