ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಸರವಾದರು ಬದಲಾಗದ ಹಾದಿ ಈ ಜೀವನ
ಶೃತಿಯಿದ್ದರೂ ಹಾಡಲಾಗದ ಹಾದಿ ಈ ಜೀವನ

ಮುರಿದ ಕನಸುಗಳೆ ನಕ್ಷತ್ರಗಳು ಅಂಬರದಲಿ
ನೋವೇ ನದಿಯಾದರು ಅಳಲಾಗದ ಹಾದಿ ಈ ಜೀವನ

ಸುಟ್ಟರು ಬಿಡದು ಪತಂಗ ದೀಪದ ನೇಹ
ತೊಳಲಿದರು ತೊರೆಯಲಾಗದ ಹಾದಿ ಈ ಜೀವನ

ತೊರೆಯು ನದಿಯಾಗಿ ಸಾಗರವ ಸೇರಿದೆ
ಜೀವನ್ಮರಣ ತಪ್ಪಿಸಲಾಗದ ಹಾದಿ ಈ ಜೀವನ

ಜೀವನುತ್ಸಾಹದಲಿ ಮಿಂದಿಹುದು ಹಸುರು ಭಾವ
ತನ್ನತನದಲಿ ಶಾರು ಬದಲಾಗದ ಹಾದಿ ಈ ಜೀವನ


About The Author

6 thoughts on “ಶಾರು ಹುಬ್ಬಳ್ಳಿ ಅವರ ಗಜಲ್”

  1. ಜೀವನ ಹೇಗಿದ್ದರೂ ಒಪ್ಪಿ ಅಪ್ಪಿಕೊಳ್ಳುವ ಪರಿ ಕಲ್ಪನೆ ಚೆನ್ನಾಗಿದೆ ಮೇಡಂ.

Leave a Reply

You cannot copy content of this page

Scroll to Top