ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಡಬೇಕಾದ ಸವಿ ಮಾತುಗಳನಿನ್ನೂ ಆಡಿಲ್ಲ ಹೊರಟು ನಿಂತೆಯೇಕೆ ನಲ್ಲ
ಕಂಡೊಡನೆ ಹೂ ಮುತ್ತೊಂದನಿನ್ನೂ ನೀಡಿಲ್ಲ ಹೊರಟು ನಿಂತೆಯೇಕೆ ನಲ್ಲ

ಇರುಳ ಬಾನಿನಲಿ ತಾರಾಮಾಲೆಗೆ ಬೆಳ್ಳಿ ಚಂದ್ರನ ಪದಕ ಮೆರುಗು ತಂದಿದೆ
ಎದೆಗೊರಗಿ ಸೃಷ್ಟಿ ಸೊಬಗನಿನ್ನೂ ನೋಡಿಲ್ಲ ಹೊರಟು ನಿಂತೆಯೇಕೆ ನಲ್ಲ

ಗಾಢ ಮೌನದಿ ಹುದುಗಿಹ ನಿನ್ನ ನಡೆಯ ಗೂಢಾರ್ಥವ ಹೇಗೆ ಅರಿಯಲಿ
ಕೊರಳನು ಬಳಸುತ ನನ್ನನಿನ್ನೂ ಕಾಡಿಲ್ಲ ಹೊರಟು ನಿಂತೆಯೇಕೆ ನಲ್ಲ

ಒಲವ ಬಿಗಿತೆಕ್ಕೆಯಲಿ ಬಂಧಿಸದೇ ತಟಸ್ಥವಾಗಿವೆ ಬಾಹುಗಳು ಅದೇಕೋ
ರಸಹೀನ ಅಧರಕೆ ಅಮೃತವನಿನ್ನೂ ತೀಡಿಲ್ಲ ಹೊರಟು ನಿಂತೆಯೇಕೆ ನಲ್ಲ

*ಹೇಮ* ಳ ಕಾಯುವಿಕೆಯ ಕಾಯಕ ಇಂದು ಕಾಣಲೇಬೇಕಿದೆ ಅಂತ್ಯವ
ಪಲ್ಲಂಗದಿ ಶೃಂಗಾರ ಕಾವ್ಯವನಿನ್ನೂ ಹಾಡಿಲ್ಲ ಹೊರಟು ನಿಂತೆಯೇಕೆ ನಲ್ಲ


About The Author

1 thought on “ಎ. ಹೇಮಗಂಗಾ‌ ಅವರ ಜುಲ್ ಕಾಫಿಯಾ ಗಜಲ್..”

  1. ಆಪ್ತ ಹೃದಯದ ಮಿಡಿತ ಗಝಲ್ ನಲ್ಲಿ ಬಹಳ ಸೊಗಸಾಗಿ ಅನಾವರಣಗೊಂಡಿದೆ.

Leave a Reply

You cannot copy content of this page

Scroll to Top