ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೇಳಿದರೂ ಕಿವುಡರಂತಿರುವ
ಈ ಜಗದ ಜನರ ಮಧ್ಯ,
ಯಾರ ಕಿವಿಗೂ ಕೇಳದಂತೆ
ಪಿಸುಗುಡಬೇಕಿದೆ ಸದ್ಯ

ಕಂಡರೂನು ಕಾಣದಂತಿರುವ
ಈ ಜಗದ ಜನರ ಮಧ್ಯ,
ಯಾರ ಕಣ್ಣಿಗೂ ಬೀಳದಂತೆ
ಸುಳಿದಾಡಬೇಕಿದೆ ಸದ್ಯ

ಘ್ರಾಣಿಸಿ ಗ್ರಹಿಸದಂತಿರುವ
ಈ ಜಗದ ಜನರ ಮಧ್ಯ,
ಯಾರ ನಾಸಿಕಕೂ ಸಿಗದಂತೆ
ಸುಮ್ಮನಿರಬೇಕು ಸದ್ಯ

ಅರಿತರೂ ಅರಿಯದಂತಿರುವ
ಈ ಜಗದ ಜನರ ಮಧ್ಯ,
ಯಾರ ಅರಿವಿಗೂ ಬಾರದಂತೆ
ದೂರವಾಗಿರಬೇಕು ಸದ್ಯ

ಜಗದ ಜಂಜಡದ ಮಧ್ಯ ಸಿಕ್ಕಿ
ಬರೆದಿರುವೆ ಈ ಸಾಲು ಸದ್ಯ,
ಕಣ್ಣು ಕಾಣದೇ ತುಟಿಯೊದದೇ
ಅನಾಥವಾಗದಿರಲಿ ಈ ಪದ್ಯ


About The Author

Leave a Reply

You cannot copy content of this page

Scroll to Top