ಕಾವ್ಯ ಸಂಗಾತಿ
ಅಶ್ವಿತಾ ಶೆಟ್ಟಿ ಮುಂಬೈ
“ಸರದಿ”

ಕಿಕ್ಕಿರಿದ ಜನಸಮೂಹದ
ಮಧ್ಯೆ ತಾಳ್ಮೆಯಿಂದ
ಕಾಯುತ್ತೇವೆ ಸರದಿ
ಬೀಸುವ ಗಾಳಿ ಸಾಲುಗಳಲ್ಲಿ
ಬ್ಯಾಂಕೋ, ಟಾಕೀಸ್,
ರೈಲ್ವೆ ಟಿಕೆಟ್ ಗಾಗಿ
ಇಲ್ಲ,ಮನೆ ಸೇರುವ
ಬಸ್ಸಿಗಾಗಿ……
ಪ್ರತಿ ಸರತಿನಲ್ಲಿ
ತೆರೆದುಕೊಳ್ಳುವ ಸತ್ಯ
ಹುಟ್ಟಿಕೊಳ್ಳುವ ಕಥೆ
ಅಪರಿಚಿತರೋಡನೆ
ಹಂಚಿಕೊಳ್ಳುವ ಕ್ಷಣ
ಕೆಲವೊಮ್ಮೆ ತಾಳ್ಮೆ ಕೆಟ್ಟು
ಜಗಳವಾಡಿದ ದಿನ….
ಜೀವನದ ಭವ್ಯ ಪ್ರದರ್ಶನಕ್ಕಾಗಿ
ಸರತಿ ಸಾಲಲ್ಲಿ ಇದ್ದೀವಿ
ಕಾಯುವೆವು ತಾಳ್ಮೆಯಿಂದ
ತೆರೆದುಕೊಳ್ಳುವ ಅವಕಾಶಕ್ಕಾಗಿ
ತೆರವುಗೊಳಿಸುವ ಮಾರ್ಗಕ್ಕಾಗಿ
ಬಾಗಿಲು ತೆರೆಯಲು
ತೆರೆದು ಮುಂದೆ ನುಗ್ಗಲು….
ಅಶ್ವಿತಾ ಶೆಟ್ಟಿಮುಂಬೈ





1 thought on “ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ””