ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂಜೆ ಎಂಬ ಪದ ಬೇಡ
ಈ ಭೂ ತಾಯಿಗೆ
ರೈತರು ಮಕ್ಕಳಿರುವಾಗ
ರೈತನ ಹಡೆದವಳು ಭೂ ತಾಯಿ
ಬೆಳೆದ ಭೂ ಒಡಲಲ್ಲಿ
ದವಸ ಧಾನ್ಯ ತರಕಾರಿ
ಹಣ್ಣು ಹಂಪಲು ಭಾರಿ
ಬಿಡಲಿಲ್ಲ ಅವನು
ಮರಳು ಕಾಳು ಕಡಿ
ಬೆನ್ನು ಹತ್ತಿದರು ದಲ್ಲಾಳಿ
ಸೊರಗಿದ ಸೋತ ರೈತ
ತಾಯಿ ಎದುರು ಶರಣಾದ
ನೇಣು ಆತ್ಮ ಹತ್ಯೆ
ಮಗನ ಕಳೆದು ಕೊಂಡ
ತಾಯಿ ವೇದನೆ ಭೂಮಿಗೆ
ಮತ್ತೆ ಬರಡಾದಳು
ಸ್ಮಾರ್ಟ್ ಸಿಟಿ ಮೆಟ್ರೋ ಸಿಟಿ
ಕಾರ್ಪೊರೇಟ್ ಜಗತ್ತಿಗೆ
ಮುಚ್ಚಿದರು ಕೆರೆ ಬಾವಿಗಳು
ಕಟ್ಟಿದರು ಮುಗಿಲು ಮುಟ್ಟುವ
ಮಹಲು ಅಪಾರ್ಟ್ಮೆಂಟ್ ಮಾಲು
ಗಿಡ ಮರ ಕಡೆದರು
ಎಲ್ಲೆಂದರಲ್ಲಿ ಮೊಬೈಲ್
ಟವರ್ ದಾಳಿ
ಸತ್ತವು ಗುಬ್ಬಿ ಹದ್ದು
ಮಾಯವಾದವು ಅಳಿಲು
ನೆಲ ಜಲ ಮರ ಗಿಡ
ಕಾಡು ಕಡಿದರು
ಕೊಳ್ಳೆ ಹೊಡೆದರು
ಗಣಿ ಲೂಟಿ ಮಾಡಿ
ಅತಿ ವೃಷ್ಟಿ ಅನಾವೃಷ್ಟಿ
ಈಗಲಾದರೂ ಮನುಜ
ಏಳ ಬೇಕು
ಜೀವ ಜಲದ ಬೇರಿಗೆ
ನೀರು ಹಣಿಸ ಬೇಕು
ಇಲ್ಲದಿರೆ ಬರಡಾಗುವಳು
ಬರಡಾದಳು ಭೂದೇವಿ
ಹೆತ್ತ ಒಡಲ ನೋವು
ಬಿಕ್ಕತಿಹಳು ಭೂ ತಾಯಿ
ಬರಡ ಬೇನೆ ತೊರೆಯಲು
ಆಗದಿರಲಿ ಭೂಮಿ ಮತ್ತೆ ಬರಡು

About The Author

1 thought on “ಅನಿತಾ ಸಿದ್ದಣ್ಣವರ ಬೆಳಗಾವಿ ಅವರ ಕವಿತೆ “ಭೂಮಿತಾಯಿ””

Leave a Reply

You cannot copy content of this page

Scroll to Top